Tuesday, May 20, 2025
Google search engine

Homeರಾಜ್ಯಸುದ್ದಿಜಾಲಪಿಎಸಿಸಿಎಸ್ ಸಹಕಾರ ಸಂಘ:ವಾರ್ಷಿಕ ಮಹಾಸಭೆ

ಪಿಎಸಿಸಿಎಸ್ ಸಹಕಾರ ಸಂಘ:ವಾರ್ಷಿಕ ಮಹಾಸಭೆ

ಪಿರಿಯಾಪಟ್ಟಣ: ತಾಲೂಕಿನ ಕೋಮಲಾಪುರ ಪಿಎಸಿಸಿಎಸ್ 2022 – 23ನೇ ಸಾಲಿನಲ್ಲಿ 5.23 ಲಕ್ಷ ಲಾಭ ಗಳಿಸಿದೆ ಎಂದು ಸಿಇಒ ಕೆ.ಎಸ್ ಪ್ರದೀಪ್ ತಿಳಿಸಿದರು.
ಸಹಕಾರ ಸಂಘದ ಆವರಣದಲ್ಲಿ ನಡೆದ 2022 – 23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು, ಸಹಕಾರ ಸಂಘದ ಮೂಲಕ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಷೇರುದಾರರಿಗೆ ಸಕಾಲದಲ್ಲಿ ತಲುಪಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಂಘದ ಮತ್ತಷ್ಟು ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸುವಂತೆ ಕೋರಿದರು.
ಸಂಘದ ಅಧ್ಯಕ್ಷ ಕೆ.ಆರ್ ಚಲುವೇಗೌಡ ಅವರು ಮಾತನಾಡಿ ಸಾಲ ಪಡೆದ ಶೇರುದಾರ ಸದಸ್ಯರು ನಿಗದಿತ ಸಮಯಕ್ಕೆ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು, ನಿಗದಿತ ಸಮಯಕ್ಕೆ ಸಾಲ ಸೌಲಭ್ಯ ವಿತರಿಸುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಸರ್ಕಾರದ ಆದೇಶದಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹುಣಸೂರು ಉಪವಿಭಾಗ ಅವರ ಆದೇಶ ಮೇರೆಗೆ ಬೈಲಾ ತಿದ್ದುಪಡಿಯಂತೆ ಪ್ರತಿ ಷೇರು ಬೆಲೆ ಸಾವಿರ ರೂ ಗಳಾಗಿದ್ದು ಉಳಿಕೆ ಶೇರು ಹಣವನ್ನು ಪ್ರತಿಯೊಬ್ಬರು ಡಿಸೆಂಬರ್ ಅಂತ್ಯದ ಒಳಗೆ ಪಾವತಿಸುವಂತೆ ತಿಳಿಸಿದರು.

ಈ ಸಂದರ್ಭ ಸಭೆಯಲ್ಲಿ ಹಾಜರಿದ್ದ ಸದಸ್ಯರು ಸಹಕಾರ ಸಂಘದಲ್ಲಿಯೇ ರೈತರಿಗೆ ಅಗತ್ಯವಿರುವ ರಸಗೊಬ್ಬರಗಳ ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ನಾಗನಾಯಕ, ನಿರ್ದೇಶಕರಾದ ಟಿ. ಚಂದ್ರೇಶ್, ನರಸಿಂಹೇಗೌಡ, ಬಿ.ಬಿ ರಮೇಶ್, ಬಿ.ಆರ್ ಮಲ್ಲಿಕಾರ್ಜುನ, ಚೆಲುವಶೆಟ್ಟಿ, ಚಂದ್ರಶೇಖರ್, ಕರಿಯಯ್ಯಾ, ವೆಂಕಟರಾಮು, ಕೆ.ಪಿ ಶಾಂತಮ್ಮ, ಪಾರ್ವತಮ್ಮ, ಗುಮಾಸ್ತ ಬಿಟಿ ಕೃಷ್ಣ ಸಹಾಯಕ ಕೆ ಬಿ ರಾಜೇಗೌಡ ಸೇರಿದಂತೆ ಸಹಕಾರ ಸಂಘ ವ್ಯಾಪ್ತಿಯ ಬೆಕ್ಕರೆ, ಕಾನೂರು, ಬಿಲ್ಲಹಳ್ಳಿ, ತೆಲಗಿನಕುಪ್ಪೆ ಸೇರಿದಂತೆ ಇತರೆಡೆಯ ಷೇರುದಾರ ಸದಸ್ಯರು ಇದ್ದರು.

RELATED ARTICLES
- Advertisment -
Google search engine

Most Popular