Wednesday, May 21, 2025
Google search engine

Homeಸ್ಥಳೀಯಪರಿಸರ ಕಾಳಜಿ ಬೆಳೆಸುವ ಚಿತ್ರಕಲಾ ಸ್ಪರ್ಧೆ

ಪರಿಸರ ಕಾಳಜಿ ಬೆಳೆಸುವ ಚಿತ್ರಕಲಾ ಸ್ಪರ್ಧೆ

ಮೈಸೂರು: ಬಿಸಾಡಿದ ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಸಿ ಗಿಡಗಳನ್ನು ಬೆಳೆಸುತ್ತಿರುವ ವಿದ್ಯಾರ್ಥಿಗಳು, ಪ್ಲಾಸ್ಟಿಕ್‌ನಿಂದ ಮಲಿನಗೊಂಡ ನೀರನ್ನುಕಂಡು ಅಳುತ್ತಿರುವ ಜಲಚರಗಳು, ಹಸುವಿನ ದೇಹದತುಂಬಾ ಪ್ಲಾಸ್ಟಿಕ್, ಮಾನವನ ಹೃದಯದಲ್ಲೂ ಪ್ಲಾಸ್ಟಿಕ್ ಇವೆಲ್ಲಕಂಡುಬಂದಿದ್ದು ಮೈಸೂರ್ ಸೈನ್ಸ್ ಫೌಂಡೇಷನ್ ಹಮ್ಮಿಕೊಂಡಿದ್ದಚಿತ್ರರಚನೆ ಸ್ಪರ್ಧೆಯಲ್ಲಿ.
ಮೈಸೂರ್ ಸೈನ್ಸ್ ಫೌಂಡೇಷನ್ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವ ಸಲುವಾಗಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ವಿಷಯಕುರಿತುಚಿತ್ರರಚನೆ ಸ್ಪರ್ಧೆಯನ್ನು ಬೋಗಾದಿಯ ಹರಿವಿದ್ಯಾಲಯದಲ್ಲಿಆಯೋಜಿಸಲಾಗಿತ್ತು. ಮೂರು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ೫ ರಿಂದ ಪದವಿಪೂರ್ವದವರೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೈಸೂರಿನ ವಿವಿಧ ಶಾಲೆಗಳಿಂದ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಕೇವಲ ಭಾಷಣಗಳಿಂದ ತರಲು ಸಾಧ್ಯವಿಲ್ಲ, ಮಕ್ಕಳಿಗೆ ಇಷ್ಟವಾಗುವ ಹಲವು ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಪರಿಸರ ಪ್ರಜ್ಞೆ ಬೆಳೆಸಬಹುದು. ಅದರಲ್ಲಿಚಿತ್ರರಚನೆಯೂಒಂದುಎಂದು ಹರಿವಿದ್ಯಾಲಯದ ಕಾರ್ಯದರ್ಶಿ ಭಗವಾನ್‌ಅಭಿಪ್ರಾಯಪಟ್ಟರು. ಮಕ್ಕಳ ಕ್ರಿಯಾಶೀಲ ಆಲೋಚನೆಗಳು ವ್ಯಕ್ತಪಡಿಸಲುಚಿತ್ರಕಲೆಒಂದುಉತ್ತಮ ಕಲೆ ಎಂದರು.
೫ರಿಂದ ೮ನೇ ತರಗತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಾವನಿ ಎಚ್.ಪಿ ೬ನೇತರಗತಿ, ಕ್ಯಾಪಿಟಲ್ ಪಬ್ಲಿಕ್ ಶಾಲೆ, ದ್ವಿತೀಯ ಸ್ಥಾನ ವೇದಶ್ರೀ ೬ನೇತರಗತಿ, ಸೆಂಟ್‌ಜೋಸೆಫ್ ಸೆಂಟ್ರಲ್ ಶಾಲೆ, ಸಮಾದಾನಕರ ಬಹುಮಾನವನ್ನುಕ್ಷಿತಿಎಸ್ ಪಾಟೀಲ್, ಎಸ್.ಜೆ.ಸಿ.ಎಸ್ ಶಾಲೆ ಮತ್ತು ದ್ರಿತಿ ವಿ ಎಸ್.ಜೆ.ಸಿ.ಎಸ್ ಶಾಲೆ ರವರು ಪಡೆದುಕೊಂಡರು ಹಾಗೆ ೯ರಿಂದ ೧೨ನೇ ತರಗತಿ ವಿಭಾಗದಲ್ಲಿ ಪ್ರಥಮ ಸ್ಥಾನ ದೀಪಶ್ರೀ. ವಿ ೯ನೇ ತರಗತಿ ಸೆಂಟ್‌ಜೋಸೆಫ್ ಪ್ರೌಢಶಾಲೆ, ದ್ವಿತೀಯ ಸ್ಥಾನ ನಿಖಿತಸಿ.ಪಿ, ೯ನೇ ತರಗತಿ, ಕ್ರೈಸ್ತ್ ಪಬ್ಲಿಕ್ ಶಾಲೆ, ಸಮಾದಾನಕರ ಬಹುಮಾನವನ್ನು ಸೌಜನ್ಯ ಬಿ.ಎಚ್, ೯ನೇತರಗತಿ, ಸೆಂಟ್‌ಜೋಸೆಫ್ ಸೆಂಟ್ರಲ್ ಶಾಲೆ ಮತ್ತು ದಿಶಾ ವಿನೋದ್, ೮ನೇತರಗತಿ ರವರು ಪಡೆದುಕೊಂಡರು. ಪದವಿಪೂರ್ವ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸಾಕ್ಷಿ ಕೆ, ಪ್ರಥಮ ಪಿಯುಸಿ, ಪ್ರಮತಿ ಹಿಲ್ ವ್ಯೂಅಕಾಡೆಮಿ, ದ್ವಿತೀಯ ಸ್ಥಾನವನ್ನುಎಮ್.ಆರ್.ಕುಮಾರ್ ನಾಯಕ್ ಪ್ರಥಮ ಪಿಯುಸಿ, ಮರಿಮಲ್ಲಪ್ಪಕಾಲೇಜ್‌ರವರು ಪಡೆದುಕೊಂಡರು.
ಕಾರ್ಯಕ್ರಮದಲ್ಲಿಎಂ.ಎಸ್.ಎಫ್‌ಅಧ್ಯಕ್ಷ ಸಿ.ಕೃಷ್ಣೇಗೌಡ, ಕಾರ್ಯದರ್ಶಿ ಜಿ.ಬಿ.ಸಂತೋಷ್‌ಕುಮಾರ್, ಸಿ.ಪುರಂದರ್, ಶ್ರೀಮತಿ ಎಚ್.ಎಸ್.ಮಂಜುಳ, ಹರಿವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular