ಇಸ್ಲಾಮಾಬಾದ್ : ಪಾಕಿಸ್ತಾನ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುತ್ತಿರುತ್ತದೆ. ಅಂತಹದೆ ಇದೀಗ ವಿಚಿತ್ರ ಪ್ರಕರಣವೊಂದರಲ್ಲಿ ಸುದ್ದಿಯಾಗಿದ್ದು, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಸಿಯಾಲ್ಕೋಟ್‌ನಲ್ಲಿ ಪಿಜ್ಜಾ ಹಟ್ ಬ್ರ್ಯಾಂಡ್ ಹೆಸರಿನಡಿ ಕಾರ್ಯನಿರ್ವಹಿಸುತ್ತಿದ್ದ ಔಟ್‌ಲೆಟ್ ಅನ್ನು ಉದ್ಘಾಟಿಸಿದ ನಂತರ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಪಿಜ್ಜಾ ಹಟ್ ಕಂಪನಿ ಆ ರೆಸ್ಟೋರೆಂಟ್ ಅನಧಿಕೃತವಾಗಿದ್ದು, ಅಸಲಿಯಲ್ಲ ನಕಲಿ ಎಂದು ಘೋಷಿಸಿದ ಕಾರಣ ಈ ವಿವಾದ ಉಂಟಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಮತ್ತು ವಿಡಿಯೊಗಳಲ್ಲಿ ಖ್ವಾಜಾ ಆಸಿಫ್ ಅವರು ಸಿಯಾಲ್ಕೋಟ್ ಕಂಟೋನ್ಮೆಂಟ್‌ನಲ್ಲಿರುವ ಆ ಔಟ್‌ಲೆಟ್‌ನಲ್ಲಿ ನಡೆದ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ರಿಬ್ಬನ್ ಕತ್ತರಿಸುವ ಕಾರ್ಯಕ್ರಮ, ಹೂವಿನ ಅಲಂಕಾರ ಹಾಗೂ ಸಣ್ಣ ಸಮಾವೇಶದೊಂದಿಗೆ ಸಮಾರಂಭ ಆಯೋಜಿಸಲಾಗಿತ್ತು.
ಇನ್ನೂ ಈ ವಿಚಾರ ವಾಗಿ ಪಿಜ್ಜಾ ಹಟ್ ಕಂಪನಿಯು ಪೋಸ್ಟ್ ಮಾಡಿದ್ದು, ಸಿಯಾಲ್‌ಕೋಟ್ ಕಂಟೋನ್ಮೆಂಟ್ ರೆಸ್ಟೋರೆಂಟ್‌ಗೆ ಪಿಜ್ಜಾ ಹಟ್ ಪಾಕಿಸ್ತಾನ್, ತಮ್ಮ ಹೆಸರಿನ ಬ್ರ್ಯಾಂಡಿಂಗ್‌ನನ್ನೂ ತಪ್ಪಾಗಿ ಬಳಸಿಕೊಂಡು ಅನಧಿಕೃತ ಔಟ್‌ಲೆಟ್ ಇತ್ತೀಚೆಗೆ ತೆರೆಯಲಾಗಿದೆ ಎಂಬುದನ್ನು ನಮ್ಮ ಗ್ರಾಹಕರಿಗೆ ತಿಳಿಸಲು ಬಯಸುತ್ತೇವೆ, ಎಂದು ಪ್ರಕಟಣೆಯಲ್ಲಿ ಹೇಳಿದೆ.

ಅಲ್ಲದೆ ಈ ಔಟ್ಲೆಟ್ ಪಿಜ್ಜಾ ಹಟ್ ಪಾಕಿಸ್ತಾನ ಬ್ರಾಂಡ್‌ಗಳೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಇದು ಪಿಜ್ಜಾ ಹಟ್‍ನ ಅಂತಾರಾಷ್ಟ್ರೀಯ ಪಾಕವಿಧಾನಗಳು, ಗುಣಮಟ್ಟದ ಪ್ರೋಟೋಕಾಲ್‌ಗಳು, ಆಹಾರ ಸುರಕ್ಷತೆ ಮತ್ತು ಮಾನದಂಡಗಳನ್ನು ಅನುಸರಿಸುವುದಿಲ್ಲ ಎಂದು ಕಂಪನಿಯು ತಿಳಿಸಿದ್ದು, ಜೊತೆಗೆ ತಮ್ಮ ಟ್ರೇಡ್‌ಮಾರ್ಕ್‌ನ ದುರುಪಯೋಗವನ್ನು ನಿಲ್ಲಿಸಲು ಮತ್ತು ತಕ್ಷಣದ ಕ್ರಮವನ್ನು ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಔಪಚಾರಿಕವಾಗಿ ದೂರು ಸಲ್ಲಿಸಲಾಗಿದೆ ಎಂದು ಕಂಪನಿಯು ಹೇಳಿದೆ.
ಪಿಜ್ಜಾ ಹಟ್ ಪಾಕಿಸ್ತಾನ್ ಪ್ರಸ್ತುತ ದೇಶಾದ್ಯಂತ 16 ಅಧಿಕೃತ ಮಳಿಗೆಗಳನ್ನು ನಿರ್ವಹಿಸುತ್ತಿದೆ. ಲಾಹೋರ್‌ನಲ್ಲಿ 14 ಮತ್ತು ಇಸ್ಲಾಮಾಬಾದ್‌ನಲ್ಲಿ ಎರಡು ಮಳಿಗೆಗಳನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದೆ. ಗ್ರಾಹಕರು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಅಂಗಡಿ ಮಳಿಗೆಗಳನ್ನು ಪರಿಶೀಲಿಸುವಂತೆ ಅದು ಒತ್ತಾಯಿಸಿದೆ.
ನಿಮ್ಮ ನಂಬಿಕೆ ನಮಗೆ ತುಂಬಾ ಮುಖ್ಯ ಎಂದು ಪಿಜ್ಜಾ ಹಟ್ ಪಾಕಿಸ್ತಾನ ಪುನರುಚ್ಚರಿಸಿತು. ಗ್ರಾಹಕರು ಅಧಿಕೃತ ಪಿಜ್ಜಾ ಹಟ್ ಅನುಭವಕ್ಕಾಗಿ ಪರಿಶೀಲಿಸಿದ ಮಳಿಗೆಗಳನ್ನು ಮಾತ್ರ ಅವಲಂಬಿಸಬೇಕು ಎಂದು ಕಂಪನಿಯು ಒತ್ತಿ ಹೇಳಿದೆ.



