Monday, May 19, 2025
Google search engine

HomeUncategorizedರಾಷ್ಟ್ರೀಯಪಾಕಿಸ್ತಾನ ಧ್ವಜ ಮಾರಾಟ ಪ್ರಕರಣ: ಅಮೆಜಾನ್, ಫ್ಲಿಪ್ ಕಾರ್ಟ್‌ಗೆ ಕೇಂದ್ರ ಸರ್ಕಾರದ ನೋಟಿಸ್

ಪಾಕಿಸ್ತಾನ ಧ್ವಜ ಮಾರಾಟ ಪ್ರಕರಣ: ಅಮೆಜಾನ್, ಫ್ಲಿಪ್ ಕಾರ್ಟ್‌ಗೆ ಕೇಂದ್ರ ಸರ್ಕಾರದ ನೋಟಿಸ್

ಪಾಕಿಸ್ತಾನ ಧ್ವಜ ಮತ್ತು ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಗ್ರಾಹಕರ ಕ್ಷೇಮಾಭಿವೃದ್ಧಿ ಸಚಿವ ಪ್ರಹ್ಲಾದ್ ಜೋಷಿ ಅವರು, ಪಾಕಿಸ್ತಾನದ ಧ್ವಜ ಹಾಗೂ ಅದರಿಂದ ಸಂಬಂಧಿಸಿದ ವಸ್ತುಗಳನ್ನು ತಕ್ಷಣದಿಂದಲೇ ವೇದಿಕೆಗಳಿಂದ ತೆಗೆದುಹಾಕಬೇಕು ಎಂದು ಸೂಚಿಸಿದ್ದಾರೆ.

ಅಮೆಜಾನ್, ಫ್ಲಿಪ್ ಕಾರ್ಟ್, ಯುಬೈ ಇಂಡಿಯಾ, ಇಟ್ಸೆ, ದಿ ಫ್ಲಾಗ್ ಕಂಪನಿ ಸೇರಿದಂತೆ ಹಲವು ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ. ಇಂತಹ ಮಾರಾಟಗಳು ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆಯಾಗಿದೆ ಮತ್ತು ಅದು ಸೂಕ್ಷ್ಮತೆಯ ಕೊರತೆಯ ಉದಾಹರಣೆ ಎಂದು ಜೋಷಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇ-ಕಾಮರ್ಸ್ ವೇದಿಕೆಗಳು ಭಾರತೀಯ ಕಾನೂನುಗಳಿಗೆ ಬದ್ಧರಾಗಿ ವರ್ತಿಸಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

RELATED ARTICLES
- Advertisment -
Google search engine

Most Popular