Saturday, December 6, 2025
Google search engine

Homeರಾಜ್ಯಸುದ್ದಿಜಾಲಜಗತ್ತಿನೆದುರು ಮತ್ತೆ ಪಾಕಿಸ್ತಾನದ ಮಾನ ಹರಾಜು

ಜಗತ್ತಿನೆದುರು ಮತ್ತೆ ಪಾಕಿಸ್ತಾನದ ಮಾನ ಹರಾಜು

ಇಸ್ಲಾಮಾಬಾದ್‌ : ಎಲ್ಲ ದೇಶಗಳ ಸಂಸತ್‌ ಕಲಾಪದಲ್ಲಿ ಆಡಳಿತ ಅಭಿವೃದ್ಧಿಗೆ, ಹೊಸ ನೀತಿ ನಿರ್ಧಾರಗಳಿಗೆ, ನೂತನ ಯೋಜನೆ ಜಾರಿ ತರುವ ಸಲುವಾಗಿ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗುತ್ತದೆ. ಇದೀಗ ಪಾಕಿಸ್ತಾನದಲ್ಲಿಯೂ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದು. ಎಂದಿನಂತೆ ಸಂಸದರು, ಜನ ಪ್ರತಿನಿಧಿಗಳು ಭಾಗಿಯಾಗುತ್ತಿದ್ದಾರೆ.

ಈ ಮಧ್ಯೆ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಕತ್ತೆಯೊಂದು ದಿಢೀರ್ ಆಗಿ ಸಂಸತ್‌ಗೆ ಎಂಟ್ರಿ ಕೊಟ್ಟಿದ್ದು ಪಾಕಿಸ್ತಾನ ಮುಜುಗರಕ್ಕೊಳಗಾಗಿದೆ. ಸಂಸತ್ತಿನಲ್ಲಿ ರಾಷ್ಟ್ರದ ಪ್ರಮುಖ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಕತ್ತೆಯೊಂದು ಸೆನೆಟ್ ಕೊಠಡಿಗೆ ಎಂಟ್ರಿ ಕೊಟ್ಟಿದ್ದು, ಈ ಘಟನೆಯಿಂದ ಅಲ್ಲಿದ್ದ ರಾಜಕೀಯ ನಾಯಕರೆಲ್ಲ ಒಂದು ಕ್ಷಣ ದಂಗಾಗಿದ್ದಾರೆ. ಮೇಲ್ಮನೆ ಕಲಾಪಗಳು ನಡೆಯುತ್ತಿದ್ದಾಗ ಕತ್ತೆ ಎಂಟ್ರಿ ಕೊಟ್ಟ ಕಾರಣ ಕೆಲ ಹೊತ್ತುಗೊಂದಲದ ವಾತಾವರಣ ಕಂಡುಬಂದಿದ್ದು ಸದ್ಯ ಈ ಕುರಿತಾದ ವಿಡಿಯೊ ಸೋಶಿಯಲ್ ‌ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಈ ಬಗ್ಗೆ ಸೆನೆಟ್ ಅಧ್ಯಕ್ಷ ಯೂಸಫ್ ರಾಜಾ ಗಿಲ್ಲಾನಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಕಾನೂನು ಸುವ್ಯವಸ್ಥೆಯಲ್ಲಿ ಪಾಲುದಾರರಾಗಲು ಪ್ರಾಣಿಗಳು ಕೂಡ ಮುಂದೆ ಬರುತ್ತಿವೆ. ಅವುಗಳಿಗೂ ಈಗ ಸಂಸತ್ತಿನ ಕಲಾಪದ ಬಗ್ಗೆ ತಿಳಿದಂತಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಈ ಹೇಳಿಕೆ ಕೇಳಿ ಅಲ್ಲಿದ್ದ ಸಂಸದರು ಚಪ್ಪಾಳೆ ತಟ್ಟಿದ್ದಾರೆ. ಘಟನೆಯ ಬಳಿಕ ಭದ್ರತಾ ಅಧಿಕಾರಿಗಳು ಕತ್ತೆಯು ಸಂಸತ್ತಿಗೆ ಹೇಗೆ ಪ್ರವೇಶಿಸಿದೆ ಎಂಬುದರ ಕುರಿತು ತನಿಖೆ ಪ್ರಾರಂಭಿಸಿದ್ದಾರೆ.

ವರದಿಯೊಂದರ ಪ್ರಕಾರ, ಕತ್ತೆಯು ಹತ್ತಿರದ‌ ಲಾಯದಿಂದ ದಾರಿ ತಪ್ಪಿ ಒಳಗೆ ಬಂದಿರಬಹುದು ಎಂದು ತಿಳಿದುಬಂದಿದೆ. ಈ ಮೂಲಕ ಸಂಸತ್ತಿನ ಭವನ ಭದ್ರತಾ ವ್ಯವಸ್ಥೆ ನ್ಯೂನತೆಯಿಂದ ಕೂಡಿದ್ದು, ಇಲ್ಲಿ ಅನೇಕ ಲೋಪ ಕಂಡು ಬರುತ್ತಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಆ ಕತ್ತೆಯು ತನ್ನ ಸ್ವಂತ ಸಂಬಂಧಿಕರನ್ನು ನೋಡಲು ಅಲ್ಲಿಗೆ ಬಂದಿರಬಹುದು. ಅಲ್ಲಿದ್ದ ತನ್ನ ‌ಸಂಬಂಧಿಕರಿಗೆ ಏನೊ ಮೆಸೇಜ್ ನೀಡಲು ಬಂದಿರಬೇಕು. ಆದರೆ ಅಷ್ಟರೊಳಗೆ ಅದನ್ನು ಓಡಿಸಿಬಿಟ್ಟಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಆ ಕತ್ತೆ ಕೂಡ ಅದೇ ಸಂಸತ್ತಿನ ಸದಸ್ಯ ಆಗಿರಬಹುದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular