Monday, November 3, 2025
Google search engine

Homeಅಪರಾಧಪಂಚಾಯತ್ ಲೈಬ್ರೆರಿಯನ್ ಆತ್ಮಹತ್ಯೆ ಪ್ರಕರಣ: ಪಿಡಿಓ ಗೀತಾಮಣಿ ಅಮಾನತು

ಪಂಚಾಯತ್ ಲೈಬ್ರೆರಿಯನ್ ಆತ್ಮಹತ್ಯೆ ಪ್ರಕರಣ: ಪಿಡಿಓ ಗೀತಾಮಣಿ ಅಮಾನತು

ನೆಲಮಂಗಲ: ಕೆಲಸ ಹಾಗೂ ಸಂಬಳದ ವಿಚಾರದಲ್ಲಿ ನೀಡುತ್ತಿದ್ದ ಕಿರುಕುಳಕ್ಕೆ ಮನನೊಂದು ಪಂಚಾಯತ್ ಲೈಬ್ರೆರಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಓ ಗೀತಾಮಣಿಯನ್ನು ಅಮಾನತು ಮಾಡಲಾಗಿದೆ.

ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್ ಲೈಬ್ರೆರಿಯನ್ ಆಗಿದ್ದ ರಾಮಚಂದ್ರಯ್ಯ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ರಾಮಚಂದ್ರಯ್ಯ ಅವರ ಅಣ್ಣನ ಮಗ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪಿಡಿಓ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧ ಕೆ.ಎಸ್ ಅವರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಳೆದ ಮೂರು ತಿಂಗಳಿಂದ ಸಂಬಳ ನೀಡದೆ ಕಿರುಕುಳ ನೀಡುತ್ತಿದ್ದರು. ಜೊತೆಗೆ ಬಯೋಮೆಟ್ರಿಕ್ ಹಾಜರಾತಿ ಹಾಕದೇ, ಇಲ್ಲಸಲ್ಲದ ಕಾರಣ ಹೇಳಿ ಕಿರುಕುಳ ನೀಡಿದ್ದರು ಎಂದು ಪಿಡಿಓ ಗೀತಾಮಣಿ ವಿರುದ್ಧ ಆರೋಪ ಕೇಳಿ ಬಂದಿತ್ತು.

RELATED ARTICLES
- Advertisment -
Google search engine

Most Popular