ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪೋಷಕರು ತಮ್ಮ ಮಕ್ಕಳು ವೈದ್ಯರು, ಇಂಜಿನಿಯರಾಗುವoತೆ ಒತ್ತಾಯಿಸುವ ಬದಲು ಪ್ರಾಮಾಣಿಕತೆ ಮತ್ತು ದೇಶಭಕ್ತಿಯನ್ನು ಬೆಳೆಸಿಕೊಳ್ಳುವುದ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಹೆಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ತಾಲೂಕು ಒಕ್ಕಲಿಗರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ೨೦೨೪-೨೫ನೇ ಸಾಲಿನ ೫ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಘ ತನ್ನ ಷೇರು ಬಂಡವಾಳವನ್ನು ಹೆಚ್ಚಿಸಿಕೊಂಡು ಕ್ಷೇತ್ರದ ಸಮಾಜದ ಜನತೆಗೆ ಸಕಾಲದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿ ಅವರ ಆರ್ಥಿಕಾಭಿವೃದ್ಧಿಗೆ ನೆರವಾಗುತ್ತಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.
ಸoಘದ ಆದಾಯವನ್ನು ದ್ವಿಗುಣಗೊಳಿಸಲು ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಸಹಕಾರ ಮನೋಭಾವನೆಯಿಂದ ಪ್ರಾಮಾಣಿಕವಾಗಿ ಶ್ರಮಿಸಬೇಕು. ನಾವೆಲ್ಲರೂ ಒಟ್ಟಿಗೆ ಸೇರಿಕೊಂಡು ಉತ್ತಮ ಸಮಾಜಮುಖಿ ಕೆಲಸವನ್ನು ಮಾಡೋಣವೆಂದ ಅವರು ಮುಂದಿನ ಮಹಾಸಭೆಯ ವೇಳೆಗೆ ಆದಾಯದ ಪ್ರಮಾಣವನ್ನು ಒಂದು ಕೋಟಿಗೆ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಸೊಸೈಟಿಯ ಅಧ್ಯಕ್ಷ ಮಿರ್ಲೆಶ್ರೀನಿವಾಸಗೌಡ ಅಧ್ಯಕ್ಷತೆ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಸೊಸೈಟಿ ೬.೬೩ ಲಕ್ಷ ರೂಗಳ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೨೦ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ. ಮುಂದಿನ ಸಾಲಿನಿಂದ ಶೇ.೨ರಷ್ಟು ಬಡ್ಡಿದರವನ್ನು ಇಳಿಕೆ ಮಾಡುವುದರ ಜತೆಗೆ ಠೇವಣಿಗಳ ಮೇಲೆ ೮.೫ ಮತ್ತು ಹಿರಿಯ ನಾಗರೀಕರಿಗೆ ಶೇ.ರಷ್ಟು ಬಡ್ಡಿ ನೀಡಲಾಗುವುದು ಎಂದು ಹೇಳಿದರು.
ಸೊಸೈಟಿಯ ವತಿಯಿಂದ ಪ್ರಸಕ್ತ ಸಾಲಿನವರೆಗೆ ೭೦೦ಕ್ಕೂ ಅಧಿಕ ಮಂದಿ ಷೇರುದಾರ ಸದಸ್ಯರಿಗೆ ಸಾಲ ವಿತರಣೆ ಮಾಡಲಾಗಿದ್ದು, ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇದರಿಂದ ಉಳಿದ ಸದಸ್ಯರಿಗೂ ಸಾಲ ಸೌಲಭ್ಯಗಳನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸೊಸೈಟಿಯ ಸಂಸ್ಥಾಪಕ ಕಾರ್ಯನಿರ್ವಾಹಖಾಧಿಕಾರಿ ಅನಿಲ್‌ಕುಮಾರ್, ಕಚೇರಿಯ ದಾನಿ ಸುದೀಶ್‌ಕುಮಾರ್ ಅವರನ್ನು ಅಭಿನಂದಿಸುವುದರ ಜತೆಗೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ವಿ.ಸಿ.ಶಿವರಾಮು, ನಿರ್ದೇಶಕರಾದ ಸಿ.ಜೆ.ಅರುಣ್‌ಕುಮಾರ್, ಶಂಕರೇಗೌಡ, ಹೆಚ್.ಪಿ.ಚಂದ್ರಶೇಖರ್, ಸಿ.ಜೆ.ಸುದೀಶ್‌ಕುಮಾರ್, ಅನೀಫ್‌ಕುಮಾರ್, ಸಿ.ಆರ್.ಉದಯಕುಮಾರ್, ವಕೀಲ ಎ.ತಿಮ್ಮಪ್ಪ, ಎಂ.ಜಿ.ಕಲ್ಪನಾಧನoಯ, ಕೆ.ವಿ.ಕವಿತಾಪ್ರಕಾಶ್, ಮುಖ್ಯಕಾರ್ಯನಿರ್ವಾಹಕಾಧಿಕಾರಿ ಕೆ.ಜಿ.ಜೀವನ್, ಸಿಬ್ಬಂದಿಗಳಾದ ಹೆಚ್.ಎನ್.ಸಹನಾ, ಹೇಮಂತ್‌ಕುಮಾರ್, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎ.ಕುಚೇಲ, ನಿರ್ದೇಶಕರಾದ ಕೆ.ಎನ್.ದೇವೇಂದ್ರ, ಮಿರ್ಲೆರಾಧಾಕೃಷ್ಣ ಹಾಜರಿದ್ದರು.