ಪಾಟ್ನಾ: ಪ್ರಯಾಣಿಕರಿದ್ದ ರಿಕ್ಷಾವೊಂದು ಕ್ರೇನ್ ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಮಂಗಳವಾರ ನಡೆದಿದೆ.
ಕಂಕರ್‌ಬಾಗ್ ಪ್ರದೇಶದಲ್ಲಿ ಪಾಟ್ನಾ ಮೆಟ್ರೋ ರೈಲು ಯೋಜನೆಯ ಸ್ಥಳದಲ್ಲಿ ಕಾಮಗಾರಿ ನಡೆಯುತಿದ್ದ ವೇಳೆ ವೇಗವಾಗಿ ಬಂದ ರಿಕ್ಷಾ ಕ್ರೇನ್ ಗೆ ಡಿಕ್ಕಿ ಹೊಡೆದಿದೆ.
ನಗರದ ಮುಖ್ಯ ರಸ್ತೆಯಲ್ಲಿ ಕ್ರೇನ್ ಮೂಲಕ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ವೇಗವಾಗಿ ಬಂದ ರಿಕ್ಷಾ ನೇರವಾಗಿ ಕ್ರೇನ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಅಲ್ಲದೆ ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ.