Saturday, February 21, 2026
Google search engine

Homeರಾಜಕೀಯಸಿಎಂ ನಡೆಗೆ ರಾಜ್ಯ ಜನತೆಗೆ ನಿರಾಸೆ : ಅಧಿಕಾರ ಶಾಶ್ವತವಲ್ಲ : ಹೆಚ್.ಡಿ. ಕುಮಾರಸ್ವಾಮಿ

ಸಿಎಂ ನಡೆಗೆ ರಾಜ್ಯ ಜನತೆಗೆ ನಿರಾಸೆ : ಅಧಿಕಾರ ಶಾಶ್ವತವಲ್ಲ : ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು : ಸಿಎಂ ಆಗಿರುವುದನ್ನು ಸಹಿಸುತ್ತಿಲ್ಲ ಎಂಬ ಸಿದ್ದರಾಮಯ್ಯ ಟ್ವೀಟ್​ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಇದು ಸಿದ್ದರಾಮಯ್ಯ ಅವರ ಒಳಗಿನ ದುಗುಡವನ್ನು ತೋರಿಸುತ್ತದೆ. ಅಧಿಕಾರ ಶಾಶ್ವತವಲ್ಲ, ಸಿದ್ದರಾಮಯ್ಯ ಅವರು ಎಂಟು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಕೇವಲ ಕುರುಬ ಸಮುದಾಯದವರು ಮಾತ್ರವಲ್ಲ, ಮೈಸೂರಿನ ರಾಜಕಾರಣದಲ್ಲಿ ಜಾತಿ ಭೇದ ಮರೆತು ಹಲವು ಸಮಾಜಗಳು ಅವರ ರಾಜಕೀಯ ಬೆಳವಣಿಗೆಗೆ ಶಕ್ತಿ ತುಂಬಿವೆ. ಈ ಸಾಮಾನ್ಯ ಜ್ಞಾನ ಅವರಿಗೆ ಇಲ್ವಾ ಎಂದು ಪ್ರಶ್ನಿಸಿದರು. ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಸಮಾಜದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ. ತಮ್ಮ ಪಕ್ಷದಲ್ಲಿ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ, ಆದರೆ ರಾಜ್ಯದ ಜನತೆಗೆ ನಿರಾಸೆ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular