ವರದಿ: ಎಡತೊರೆ ಮಹೇಶ್
ಪೀಪಲ್ ಟ್ರೀ ಮತ್ತು ರಾಜ್ಯ ಗ್ರಾಮ ಪಂಚಾಯತ್ ಸದಸ್ಯರುಗಳ ಮಹಾ ಒಕ್ಕೂಟದ ಸಹಯೋಗದಲ್ಲಿ ಸಂವಾದ ಕಾರ್ಯಕ್ರಮವನ್ನು ಹ್ಯಾಂಡ್ ಪೋಸ್ಟ್ ಮೈರಾಡ ಕಚೇರಿಯಲ್ಲಿ ಆಯೋಜನೆ ಮಾಡಲಾಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಟ ಶೆಟ್ಟಳ್ಳಿ ಸತೀಶ್ ರವರು ನೆರವೇರಿಸಿದರು
ಈ ಕಾರ್ಯಾಗಾರದಲ್ಲಿ ರಾಜ್ಯ ಒಕ್ಕೂಟದ ಅಧ್ಯಕ್ಷರು,ಜಿಲ್ಲಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಎಲ್ಲ ತಾಲ್ಲೂಕು ಪಂಚಾಯತ್ ಅಧ್ಯಕ್ಷರುಗಳು, ಸದಸ್ಯರುಗಳು ಹಾಗೂ ತಾಲ್ಲೂಕು ಗ್ರಾಮ ಪಂಚಾಯತ್ ಪದಾಧಿಕಾರಿಗಳು ಹಾಗೂ ಸಂಸ್ಥೆ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದರು.
ಇಡಿ ಕಾರ್ಯಕ್ರಮವನ್ನು ನಿರೂಪಣೆ ಮಾಡುದರ ಮೂಲಕ ಮಾತನಾಡಿದ ಅವರು ಶ್ರೀ ಎಡತೊರೆ ಮಹೇಶ್ ರವರು ಪೀಪಲ್ ಟ್ರೀ ಸಂಸ್ಥೆಯು ಗ್ರಾಮ ಪಂಚಾಯಿತಿಗಳ ಜೊತೆ ಕೆಲಸ ಮಾಡುತ್ತಾ ನಮ್ಮಗಳ ಮೂಲಕ ಸಮುದಾಯದ ಅಭಿರುದ್ದಿಗೆ ಒಳ್ಳೆಯ ಯೋಜನೆಗಳನ್ನು ಹಾಕಿಕೊಂಡು ಶ್ರಮಿಸುತ್ತದೆ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಮೊದಲಿಗೆ ಪ್ರಾಥನೆಯ ಸಭೆಯನ್ನು ಪ್ರಾರಂಭ ಮಾಡಿದರು. ನಂತರ ಎಲ್ಲರಿಗೂ ಶ್ರೀ ಮಹೇಶ್ ರವರು ಪಂಚಾಯತ್ಸ್ವಾ ಪವರ್ ಪುಸ್ತಕ ನೀಡುವುದರ ಮೂಲಕ ಸ್ವಾಗತ ಕೋರಿದರು ನಂತರ ಸಂವಾದ ಕಾರ್ಯಗಾರವನ್ನು ಗಿಡ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಪ್ರಾಸ್ತವಿಕೆವಾಗಿ ಚನ್ನಕೇಶವ ರವರು ಮಾತನಾಡಿ, ಸಂಸ್ಥೆಯ ಪರಿಚಯ ಮತ್ತು ಉದ್ದೇಶವು ಸಂಸ್ಥೆಯು ಕಳೆದ 15 ವರ್ಷಗಳಿಂದ ಆದಿವಾಸಿ. ಸಮುದಾಯದ ಅಭಿವೃದ್ಧಿ ಮತ್ತು ರೈತರ ಸಮುದಾಯಗಳ ಆಹಾರ ಭದ್ರತೆ, ಕೃಷಿ ಪದ್ಧತಿ ಕೋಟೆ ತಾಲ್ಲೂಕಿನ ಇಂದು ಕೃಷಿಯಲ್ಲಿ ಬೆಳಗಳ ವೈವಿಧ್ಯತೆ ಇಲ್ಲ ತಾಲ್ಲೂಕುನಲ್ಲಿ ಅರಣ್ಯ ಸಂಪತ್ತು 4 ಜಲಾಶಯಗಳು ಇದ್ದು ಇತ್ತೀಚಿಗೆ ಎಲ್ಲ ವಾಣಿಜ್ಯ ಬೆಳೆಗಳಿಗೆ ಮಾರು ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಮಣ್ಣು, ನೀರು ಜೀವ ವೈವಿಧ್ಯತೆ ಸಂರಕ್ಷಣೆ ಮಾಡುವಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳ ಪಾತ್ರ ಬಹಳ ಮುಖ್ಯ ಗ್ರಾಮ ಪಂಚಾಯಿತಿಗಳು ಅಭಿರುದ್ದಿಯಲ್ಲಿ ಕೆರೆಗಳ ಅಭಿವೃದ್ಧಿ, ಕೃಷಿಯ ಯೋಜನೆಗಳು ರೈತ ಸಮುದಾಯಗಳಿಗೆ ತಲುಪುವ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿಪಡಿಸಬೇಕಾಗಿದೆ ಎಂದು ತಿಳಿಸಿಕೊಡುತ್ತಾ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ಕಾರ್ಯಗಾರವನ್ನು ಆಯೋಜನೆ ವಿಷಯಗಳ ವಾರು ಹಕ್ಕೋತ್ತಾಯ ಮಾಡಿ ಸರ್ಕಾರಕ್ಕೆ ಸಲ್ಲಿಸುವುದು ಎಂದು ತಿಳಿಸಿಕೊಟ್ಟರು
ನಂತರ ಜವರೇಗೌಡ ರವರು ಮಾತನಾಡಿ ಸಂಸ್ಥೆಯು ಸಂವಿಧಾನ ಆಶಯ ಮತ್ತು ಸಾಮಾಜಿಕನ್ಯಾಯ, ಅವಕಾಶಗಳ ಮೂಲಕ ಸರ್ಕಾರಯೋಜನೆಗಳನ್ನು ಸಮುದಾಯದ ಅಭಿರುದ್ದಿಗೆ ಶ್ರಮಿಸುತ್ತದೆ. ಅಂದರೆ ಸಮುದಾಯದ ನಾಯಕತ್ವದ ಚೇತರಿಕೆಗೆ ಅವಕಾಶ ಮತ್ತು ಸಾಮಾರ್ತ್ಯಾ ವನ್ನು ಬೆಳಸುವುದು ಈ ಹಿನ್ನಲೆಯಲ್ಲಿ ಸಂಸ್ಥೆಯು 12 ಗ್ರಾಮ ಪಂಚಾಯಿತಿಗಳೊಂದಿಗೆ ಕಾರ್ಯನಿರ್ವಹಿಸುತ್ತದೇ ಅಭಿವೃದ್ಧಿಅಂದರೆ ರಸ್ತೆ, ಮನೆ, ಕೊಟ್ಟಿಗೆ ಇವುಗಳನ್ನು ನಾವುಗಳು ಅಭಿವೃದ್ಧಿಎನ್ನುತ್ತವೆ. ಗ್ರಾಮ ಪಂಚಾಯತ್ ಸ್ಥಳೀಯ ಸರ್ಕಾರವಾಗಿದ್ದು ಇದು ಗ್ರಾಮ ಸಭೆ, ವಾರ್ಡ್ ಸಭೆಗಳ ಮೂಲಕ ಕ್ರಿಯಾಯೋಜನೆ ಸಿದ್ದಪಡಿಸಿ ಸಮುದಾಯದ ಅಭಿವೃದ್ಧಿ ಗೆ ನಿಂತಿದೆ ನಾವುಗಳು 12 ಗ್ರಾಮ ಪಂಚಾಯಿತಿಗಳಲ್ಲಿ Biodiversity committee ರಚನೆ ಮಾಡಿದ್ದೇವೆ ಈ ಸಮಿತಿಗಳಿಗೆ ಎರಡು ಹಂತದ ತರಬೇತಿಯನ್ನು ನೀಡಿದ್ದೇವೆ. ಈ ಸಮಿತಿಗಳ ಮೂಲಕ ಕೆರೆಗಳ ಅಭಿವೃದ್ಧಿ ಮತ್ತು ಗಿಡಗಳನ್ನು ಹಾಕುವುದು, ಈ ಎಲ್ಲ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಕಾರ್ಯಗಾರವನ್ನು ಆಯೋಜನೆ ಮಾಡಲು ಸಹಕಾರ ನೀಡಬೇಕಾಗಿ ಮನವಿ ಮಾಡಿದರು ನಂತರ ಎಲ್ಲ ಸದಸ್ಯರುಗಳ ತಮ್ಮ ತಮ್ಮ ಗ್ರಾಮ ಪಂಚಾಯತ್ ಗಳ ಅಭಿವೃದ್ಧಿಕೆಲಸಗಳ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದರು.

ನಂತರ ಅಂತಿಮವಾಗಿ ಮಾತನಾಡಿದ ರಾಜ್ಯ ಅಧ್ಯಕ್ಷರಾದ ಕಾಡನಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ಇಂದಿನ ಸಂವಾದ ಕಾರ್ಯಕ್ರಮವನ್ನು ಪೀಪಲ್ ಟ್ರೀ ಸಂಸ್ಥೆಯು ಆಯೋಜನೆ ಮಾಡಿರುವುದು ಶ್ಲಾಘನೀಯ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಪಂಚಾಯತ್ ಹಂತದಲ್ಲಿ ಗ್ರಾಮ ಪಂಚಾಯತ್ ಕಾಯಿದೆಯ ಅರಿವು, ಎಂ ಜಿ ಎನ್ ಆರ್ ಜಿ ಕಾಯಿದೆ, ಮಾಹಿತಿ ಹಕ್ಕು ಇನ್ನು ಹಲವು ಕಾನೂನು ಬದ್ದ ಕೇಂದ್ರ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸಮುದಾಯದ ಅಭಿವೃದ್ದಿಗೆ ಗ್ರಾಮ ಸಭೆ ವಾರ್ಡ್ ಸಭೆಯಲ್ಲಿ ಕ್ರಿಯಾಯೋಜನೆ ಸಿದ್ದಪಡಸಬೇಕಾಗಿದೆ ವಾರ್ಡ್ ಸಭೆ, ಗ್ರಾಮ ಸಭೆಯಲ್ಲಿ ಸಮುದಾಯಕ್ಕೆ ಏನು ಬೇಕಾಗಿದೆ ಏನು ಅವಶ್ಯಕತೆ ಇದೆ. ಎಂಬುದನ್ನು ಅಭಿಪ್ರಾಯದ ಅರ್ಜಿಗಳ ಅಹ್ವಾವಲು ಮೇರೆಗೆ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಅನುಷ್ಠಾನ ಮಾಡಬೇಕಾಗಿದೆ. ಪಂಚಾಯತ್ ರಾಜ್ ಕಾಯಿದೆಯು ಅಧಿಕಾರಿ ವಿಕೇಂದ್ರೀಕರಣ ವ್ಯವಸ್ಥೆ ಯಲ್ಲಿ 73 ನೇ ಕಾಯಿದೆಯಲ್ಲಿ 29 ವಿಷಯಗಳಮೂಲಕ 29 ನೇ ಇಲಾಖೆಗಳ ಜೊತೆ ಸಂಪರ್ಕವಾಗಿ ಇಲಾಖೆ ವಾರು ಕ್ರಿಯಾಯೋಜನೆ ಸಿದ್ದಪಡಿಸಿ ವಾರ್ಷಿಕ 5ನೇ ಹಣಕಾಸು ಯೋಜನೆ ಯಡಿಯಲ್ಲಿ ವಾರ್ಷಿಕ ಅನುದಾನ ಬಳಕೆ ಆಗಬೇಕು ಕಾಲಂ 243 ಜಿ ಅನ್ವಯ ಶಾಸನ ಬದ್ದ ಅನುದಾನ, ವರ್ಗ 1 ವರ್ಗ 2 ಕೇಂದ್ರ ಸರ್ಕಾರದ ತೆರಿಗೆ ಹಣ ರಾಜ್ಯ ಸರ್ಕಾರದ ತೆರಿಗೆ ಹಣವು ಸಮುದಾಯದ ಅಭಿರುದ್ದಿಗೆ ಅನುದಾನಗಳ ಬಳಕೆ ಆಗಬೇಕು ಜೊತೆ ಗ್ರಾಮ ಪಂಚಾಯತ್ ಯಲ್ಲಿ ಜೀವ ವೈವಿಧ್ಯ ಸಮಿತಿಯನ್ನು ರಚನೆ ಮಾಡಬೇಕು ಆದರೆ ಸಂಸ್ಥೆಯು 12 ಗ್ರಾಮ ಪಂಚಾಯಿತಿಗಳಲ್ಲಿ ರಚನೆ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಮಟ್ಟದಲ್ಲಿಜೀವ ವ್ಯವಿಧ್ಯ ಮಂಡಳಿ ಇದೆ ಈ ಮಂಡಳಿಯು ಅನುದಾನ ಬಳಕೆ ಮಾಡಿಕೊಂಡು ಶಾಲೆ ಅಭಿವೃದ್ಧಿ ನರ್ಸರಿ ಗಿಡಗಳ ಬೆಳವಣಿಗೆ ಅಳವಿಅಂಚಿನ ಪ್ರಬೇಧಗಳ ಸಂರಕ್ಷಣೆ ಮಾಡಬೇಕಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು ಎಲರಿಗೂ ತಮ್ಮ ಅಭಿಪ್ರಾಯ ಅನಿಸಿಕೆಗಳ ವ್ಯಕ್ತ ಪಡಿಸಿ ನಂತರ ವಂದನೆಗಳನ್ನು ತಿಳಿಸಿ ಕಾರ್ಯಕ್ರಮ ವನ್ನು ಅಂತಿಮ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಡಶೆಟ್ಟಳ್ಳಿ ಸತೀಶ್ ಮೈಸೂರು ಜಿಲ್ಲಾಧ್ಯಕ್ಷರಾದ ನಾಗರಾಜ್ ರಾಜ್ಯ ಸಲಹೆಗಾರದ ರಾಜ ಹುಣಸೂರ್ ಪೀಪಲ್ ಟ್ರೀ ಸಂಸ್ಥೆಯ ಜವರೇಗೌಡ ಚೆನ್ನಕೇಶವ ಲತಾ ಕೋಟೆ ಅಧ್ಯಕ್ಷರಾದ ಗುರುಸ್ವಾಮಿ ಸರಗೂರ್ ತಾಲೂಕಿನ ಅಧ್ಯಕ್ಷರಾದ ಚಂದ್ರಶೇಖರ್ ಹುಣಸೂರಿನ ರಮೇಶ್ ಕೆ ಆರ್ ನಗರದ ನಟರಾಜ್ ಮತ್ತು ದ್ರಾಕ್ಷಾಯಿಣಿ ಗುಂಡ್ಲುಪೇಟೆಯ ಮಹೇಂದ್ರ ಚಾಮರಾಜನಗರ ಜಿಲ್ಲಾಧ್ಯಕ್ಷರಾದ ಕೆಂಪರಾಜ್ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರುಗಳು ಪದಾಧಿಕಾರಿಗಳು ಜಿಲ್ಲಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು