Wednesday, June 24, 2026
Google search engine

Homeರಾಜ್ಯಸುದ್ದಿಜಾಲಬಾಡೂಟ, ಸೀರೆಗೆ ಮುಗಿಬಿದ್ದ ಜನ!. ನೂಕುನುಗ್ಗಲು ಪರಿಣಾಮ, 5 ಮಂದಿಗೆ ಕೈ ಕಾಲು ಮುರಿತ

ಬಾಡೂಟ, ಸೀರೆಗೆ ಮುಗಿಬಿದ್ದ ಜನ!. ನೂಕುನುಗ್ಗಲು ಪರಿಣಾಮ, 5 ಮಂದಿಗೆ ಕೈ ಕಾಲು ಮುರಿತ

ಮಂಡ್ಯ: ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಶಾಸಕ ಹೆಚ್.ಟಿ. ಮಂಜು ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಸಂಭವಿಸಿ ಐವರು ಗಾಯಗೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೆ ಮಟನ್ ಊಟ ಹಾಗೂ ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಗುತ್ತಿತ್ತು. ಉಚಿತ ಸೀರೆ ಮತ್ತು ಬಾಡೂಟ ಪಡೆಯಲು ಸಾವಿರಾರು ಜನರು ಮುಗಿಬಿದ್ದ ಪರಿಣಾಮ ಗೊಂದಲ ಉಂಟಾಯಿತು.

ಸೂಕ್ತ ವ್ಯವಸ್ಥೆಗಳ ಕೊರತೆಯಿಂದ ನೂಕುನುಗ್ಗಲು ಸಂಭವಿಸಿದ್ದು, ಘಟನೆಯಲ್ಲಿ ಐವರಿಗೆ ಕೈ-ಕಾಲು ಮುರಿದಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ಹಾಗೂ ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

RELATED ARTICLES
- Advertisment -
Google search engine

Most Popular