ಪಿರಿಯಾಪಟ್ಟಣ:2022 ರಲ್ಲಿ ಆರಂಭಗೊಂಡ ಪಿರಿಯಾಪಟ್ಟಣ ಲಯನ್ಸ್ ಕ್ಲಬ್‌ಗೆ ಸತತ ಮೂರನೇ ಬಾರಿಗೆ ಲಯನ್ಸ್ ಜಿಲ್ಲಾ ಪ್ರಶಸ್ತಿ ದೊರೆತಿದೆ.
ಲಯನ್ಸ್ ಜಿಲ್ಲೆ 317 ಡಿ ಯಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಂಭ್ರಮದಲ್ಲಿ ಐದು ವರ್ಷಗಳ ಒಳಗಿನ 10 ಕ್ಲಬ್‌ಗಳು ಒಂದು ವರ್ಷದ ಆಡಳಿತಾತ್ಮಕ ಮತ್ತು ಸೇವೆಯಲ್ಲಿ ಸಾಧನೆಯನ್ನು ಗುರುತಿಸಿ 2024 25 ನೇ ಸಾಲಿನ ಜಿಲ್ಲಾ ಗವರ್ನರ್ ಬಿ ಎಂ ಭಾರತಿ ರವರು ಪ್ರಶಸ್ತಿಯನ್ನು ವಿತರಿಸಿದರು. ಜೊತೆಯಲ್ಲಿ ಕ್ಲಬ್ ನ ಸದಸ್ಯರಾದ ಕೆ ಮಾದೇವಪ್ಪನವರಿಗೆ ಡೈಮಂಡ್ ಜೋನ್ ಚೇರ್ ಪರ್ಸನ್ ಪ್ರಶಸ್ತಿ ದೊರೆತಿದೆ.
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷರಾದ ಪಿ ಕೆ ಕುಮಾರ್ ಕಾರ್ಯದರ್ಶಿ ಜಿ ಗಿರೀಶ್ ಸದಸ್ಯರಾದ ಮಂಜುನಾಥ್ ಸಿಂಗ್, ಆನಂದ್, ಸುಬ್ರಮಣ್ಯ ಇತರರು ಇದ್ದರು.