ಪಿರಿಯಾಪಟ್ಟಣ: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ರವರು ಪಕ್ಷದ ನಾಯಕರ ಜತೆ ಮಾ.21 ರಂದು ಪಿರಿಯಾಪಟ್ಟಣ ತಾಲೂಕಿನ ಹಲವೆಡೆ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕೊಪ್ಪ ರಾಜೇಂದ್ರ ತಿಳಿಸಿದ್ದಾರೆ.
ಅಭ್ಯರ್ಥಿಯ ಜತೆ ಸಂಸದರಾದ ಪ್ರತಾಪ್ ಸಿಂಹ, ಮಾಜಿ ಶಾಸಕ ರಾಮದಾಸ್, ಚುನಾವಣಾ ಉಸ್ತುವಾರಿ ಮೈ.ವಿ ರವಿಶಂಕರ್, ಜಿಲ್ಲಾಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ ಸೇರಿದಂತೆ ಪಕ್ಷದ ಜಿಲ್ಲಾ ವಿವಿಧ ಮೋರ್ಚ ಪದಾಧಿಕಾರಿಗಳು ಮುಖಂಡರು ಆಗಮಿಸುತ್ತಿದ್ದು ಅಂದು ಬೆಳಿಗ್ಗೆ 9 ಗಂಟೆಗೆ ತಾಲೂಕಿನ ಗಡಿಭಾಗ ಕಂಪಲಾಪುರ ಗ್ರಾಮದಲ್ಲಿ ತಾಲೂಕು ಘಟಕ ವತಿಯಿಂದ ಕಾರ್ಯಕರ್ತರ ಸಮ್ಮುಖ ಅಭ್ಯರ್ಥಿಯಾದ ಯದುವೀರ್ ಒಡೆಯರ್ ಸೇರಿದಂತೆ ಪ್ರಮುಖರನ್ನು ಸ್ವಾಗತಿಸಲಾಗುವುದು ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಅಭ್ಯರ್ಥಿ ಮಾತನಾಡಲಿದ್ದಾರೆ.
10.30 ಕ್ಕೆ ಪಿರಿಯಾಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ ಬಳಿಕ ಪಟ್ಟಣದ ಬೆಟ್ಟದಪುರ ಸರ್ಕಲ್ ಬಳಿ ಸಾರ್ವಜನಿಕರನ್ನು ಕುರಿತು ಮಾತನಾಡಲಿದ್ದಾರೆ, 11.15 ಕ್ಕೆ ಹಿಟ್ನೆಹೆಬ್ಬಾಗಿಲು ಗ್ರಾಮಕ್ಕೆ ಭೇಟಿ, 12 ಗಂಟೆಗೆ ಬೆಟ್ಟದಪುರಕ್ಕೆ ಭೇಟಿ, 12.15 ಕ್ಕೆ ಅತ್ತಿಗೋಡು ಗ್ರಾಮಕ್ಕೆ ಭೇಟಿ, 12.30 ಕ್ಕೆ ಕಿತ್ತೂರು ಗ್ರಾಮಕ್ಕೆ ಭೇಟಿ, 1 ಗಂಟೆಗೆ ರಾವಂದೂರಿಗೆ ಭೇಟಿ ಬಳಿಕ ಗ್ರಾಮದ ಮುರುಘ ರಾಜೇಂದ್ರ ಮಠಕ್ಕೆ ಭೇಟಿ ನೀಡಲಿದ್ದಾರೆ, ಮದ್ಯಾಹ್ನ 2.45 ಕ್ಕೆ ಮಾಕೋಡು ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಭ್ಯರ್ಥಿ ಪ್ರಚಾರದ ವೇಳೆ ತಾಲ್ಲೂಕು ಪ್ರಮುಖರು,ಎಲ್ಲಾ ಮಹಾಶಕ್ತಿ ಹಾಗೂ ಶಕ್ತಿ ಕೇಂದ್ರ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ಸ್ತರದ ವಿವಿಧ ಮೋರ್ಚಾ ಪದಾಧಿಕಾರಿಗಳು, ಮಹಿಳೆಯರು, ಬೂತ್ ಮಟ್ಟದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕಾರ ನೀಡುವಂತೆ ಕೋರಿದ್ದಾರೆ.