ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಉಪ ಪ್ರಧಾನಿ ದಿವಂಗತ ಜಗಜೀವನ್ ರಾಮ್ ಅವರಿಗೆ ನಮನ ಸಲ್ಲಿಸಿದ್ದಾರೆ. ಜಗಜೀವನ್ ರಾಮ್ ಜನ್ಮದಿನದ ಪ್ರಯುಕ್ತ ಸಾರ್ವಜನಿಕ ಸೇವೆ ತಮ್ಮ ಜೀವವನ್ನೆ ಮುಡಿಪಾಗಿಟ್ಟಿದ್ದ ಧೀಮಂತ ದಲಿತ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಾರ್ವಜನಿಕ ಸೇವೆಗೆ ಅವರ ಸಮರ್ಪಣೆ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯು ದೇಶದ ಪ್ರತಿ ಪೀಳಿಗೆಗೆ ಸೂರ್ತಿ ನೀಡುತ್ತದೆ ಎಂದು ಮೋದಿ ಎಕ್ಸ್‌ನಲ್ಲಿ ಹೇಳಿದರು, ಹಿಂದಿನ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸುವ ಆಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.