Saturday, June 13, 2026
Google search engine

Homeದೇಶಪಿಎಂ ಮೋದಿ ಫ್ರಾನ್ಸ್ ಪ್ರವಾಸ: ‘ಭಾರತ್ ಇನ್ನೋವೇಟ್ಸ್ 2026’ ಉದ್ಘಾಟನೆ, ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಭಾಗಿ

ಪಿಎಂ ಮೋದಿ ಫ್ರಾನ್ಸ್ ಪ್ರವಾಸ: ‘ಭಾರತ್ ಇನ್ನೋವೇಟ್ಸ್ 2026’ ಉದ್ಘಾಟನೆ, ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಭಾಗಿ

ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಜಂಟಿಯಾಗಿ ಜೂನ್ 14 ರಂದು ‘ಪ್ಯಾಲೇಸ್ ಡೆಸ್ ಎಕ್ಸ್‌ಪೋಸಿಷನ್ಸ್ ಡಿ ನೈಸ್’ ನಲ್ಲಿ ‘ಭಾರತ್ ಇನ್ನೋವೇಟ್ಸ್ 2026’ (Bharat Innovates 2026) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಭಾರತ ಸರ್ಕಾರ ಆಯೋಜಿಸುತ್ತಿರುವ ಈ ಕಾರ್ಯಕ್ರಮವು ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಮುಖ ಉಪಕ್ರಮವಾಗಿದೆ. ಇದರಲ್ಲಿ 120 ಭಾರತೀಯ ನಾವೀನ್ಯಕಾರರು (ಇನ್ನೋವೇಟರ್ಸ್), 15 ಉನ್ನತ ಶಿಕ್ಷಣ ಸಂಸ್ಥೆಗಳು (HEI) ಮತ್ತು 500 ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಲಿದ್ದಾರೆ. ಇವರಲ್ಲಿ ಪ್ರಮುಖ ಕಾರ್ಪೊರೇಟ್‌ಗಳು ಮತ್ತು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳೊಂದಿಗೆ ಜಾಗತಿಕ ಸಿಇಒಗಳು ಹಾಗೂ ಉದ್ಯಮದ ಮುಖಂಡರು ಒಳಗೊಂಡಿದ್ದಾರೆ.

ಈ ಪ್ರದರ್ಶನದಲ್ಲಿ ಭಾರತದ ಬೆಳೆಯುತ್ತಿರುವ ನಾವೀನ್ಯತೆ ಮತ್ತು ‘ಡೀಪ್ ಟೆಕ್’ ಪರಿಸರ ವ್ಯವಸ್ಥೆಯನ್ನು ಬಿಂಬಿಸುವ 13 ಪ್ರಮುಖ ಕ್ಷೇತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ಅಡ್ವಾನ್ಸ್ಡ್ ಕಂಪ್ಯೂಟಿಂಗ್ (Advanced Computing)

ಸೆಮಿಕಂಡಕ್ಟರ್ (Semiconductor)

ಬಾಹ್ಯಾಕಾಶ ತಂತ್ರಜ್ಞಾನ (Space Technology)

ಬಯೋಟೆಕ್ನಾಲಜಿ (Biotechnology)

ಇಂಧನ (Energy)

ಆರೋಗ್ಯ ಸೇವೆ (Healthcare)

ಉತ್ಪಾದನಾ ವಲಯ (Manufacturing) ಇತ್ಯಾದಿ.

ಪ್ರಧಾನಿ ಮೋದಿ ಅವರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕೂಡ ಉಪಸ್ಥಿತರಿರುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್ ಅವರೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಭಾರತದಿಂದ 120 ಸ್ಟಾರ್ಟ್-ಅಪ್‌ಗಳನ್ನು ಆಯ್ಕೆ ಮಾಡಲು ರಚಿಸಲಾಗಿದ್ದ ತಾಂತ್ರಿಕ ಉಸ್ತುವಾರಿ ಸಮಿತಿಯ ನೇತೃತ್ವವನ್ನು ಅಜಯ್ ಕುಮಾರ್ ಸೂದ್ ಅವರೇ ವಹಿಸಿದ್ದರು.

ಜಾಗತಿಕ ಹೂಡಿಕೆಗೆ ವೇದಿಕೆ

‘ಭಾರತ್ ಇನ್ನೋವೇಟ್ಸ್ 2026’ ರ ಮೊದಲ ಸೆಷನ್ ನೈಸ್‌ನಲ್ಲಿ (Nice) ಜಾಗತಿಕ ಹೂಡಿಕೆದಾರರು ಮತ್ತು ಉದ್ಯಮಿಗಳ ಮುಂದೆ ಭಾರತದ ಡೀಪ್ ಟೆಕ್ ನಾವೀನ್ಯಕಾರರು ಮತ್ತು ಸ್ಟಾರ್ಟ್-ಅಪ್‌ಗಳ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಭಾರತ ಮತ್ತು ಜಾಗತಿಕ ಪಾಲುದಾರರ ನಡುವೆ ನಾವೀನ್ಯತೆ ಆಧಾರಿತ ಸಹಭಾಗಿತ್ವವನ್ನು ಉತ್ತೇಜಿಸಲು ಈ ಈವೆಂಟ್ ಅತ್ಯಂತ ಪ್ರಭಾವಶಾಲಿ ವೇದಿಕೆಯಾಗಿ ಕೆಲಸ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಕಾರ್ಯಕ್ರಮದ ಅವಧಿಯಲ್ಲಿ ಹಲವು ಪ್ರಮುಖ ಘೋಷಣೆಗಳು ಮತ್ತು ಒಪ್ಪಂದಗಳು ಹೊರಬೀಳುವ ಸಾಧ್ಯತೆಯಿದೆ. ಇದರಲ್ಲಿ ಮುಖ್ಯವಾಗಿ ಡೀಪ್ ಟೆಕ್ ಮತ್ತು ಸಂಶೋಧನೆ-ಅಭಿವೃದ್ಧಿ (R&D), ಸ್ಟಾರ್ಟ್-ಅಪ್‌ಗಳ ವಿಸ್ತರಣೆ (Scaling), ಗಡಿಯಾಚೆಗಿನ ಹೂಡಿಕೆ ಸರಳಗೊಳಿಸುವಿಕೆ (Cross-border Investment) ಯಲ್ಲಿ ಬಲವಾದ ಸಹಯೋಗದ ಚೌಕಟ್ಟುಗಳು ಸೇರಿವೆ.

ಇದು ಭಾರತ ಮತ್ತು ಫ್ರಾನ್ಸ್‌ನ ನಾವೀನ್ಯತೆ ಪರಿಸರ ವ್ಯವಸ್ಥೆಗಳ ನಡುವೆ ಸಾಂಸ್ಥಿಕ ಪಾಲುದಾರಿಕೆಯ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಮುಖ್ಯವಾಗಿ ಸಹ-ಅಭಿವೃದ್ಧಿ (ಕೋ-ಡೆವಲಪ್‌ಮೆಂಟ್), ತಂತ್ರಜ್ಞಾನ ವಿನಿಮಯ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕ್ಷಿಪ್ರ ಅಭಿವೃದ್ಧಿಗೆ ಇಲ್ಲಿ ವಿಶೇಷ ಒತ್ತು ನೀಡಲಾಗುತ್ತದೆ.

ಉದ್ದೇಶ ಮತ್ತು ಜಾಗತಿಕ ನೆಟ್‌ವರ್ಕ್

ಭಾಗವಹಿಸುವ ನಾವೀನ್ಯಕಾರರು ಮತ್ತು ಸಂಸ್ಥೆಗಳನ್ನು ಜಾಗತಿಕ ಹೂಡಿಕೆದಾರರು, ಕಾರ್ಪೊರೇಟ್‌ಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಿ ಪಾಲುದಾರರೊಂದಿಗೆ ಜೋಡಿಸುವುದು ಈ ಉಪಕ್ರಮದ ಪ್ರಮುಖ ಗುರಿಯಾಗಿದೆ.

ಇದರ ಮೂಲಕ ಹೂಡಿಕೆ, ತಂತ್ರಜ್ಞಾನದ ಮೌಲ್ಯೀಕರಣ, ಜಂಟಿ ಅಭಿವೃದ್ಧಿಯ ಅವಕಾಶಗಳು, ಪ್ರಾಯೋಗಿಕ ಯೋಜನೆಗಳು (ಪೈಲಟ್ ಪ್ರಾಜೆಕ್ಟ್ಸ್), ಉತ್ಪಾದನಾ ಪಾಲುದಾರಿಕೆಗಳು ಮತ್ತು ತಂತ್ರಜ್ಞಾನದ ಹಸ್ತಾಂತರಕ್ಕೆ ಹೊಸ ಮಾರ್ಗಗಳು ಮುಕ್ತವಾಗಲಿವೆ. ಅಷ್ಟೇ ಅಲ್ಲದೆ, ಭಾರತೀಯ ಆವಿಷ್ಕಾರಗಳಿಗೆ ಹೊಸ ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಮತ್ತು ಅವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಇದು ಸಹಾಯ ಮಾಡುತ್ತದೆ.

‘ಭಾರತ್ ಇನ್ನೋವೇಟ್ಸ್ 2026’ ಜಾಗತಿಕ ನಾವೀನ್ಯತೆ ನೆಟ್‌ವರ್ಕ್‌ನೊಂದಿಗೆ ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಪ್ರಮುಖ ಹಬ್ ಆಗಿ ಭಾರತದ ಸ್ಥಾನವನ್ನು ಇದು ಇನ್ನಷ್ಟು ಬಲಪಡಿಸಲಿದೆ. ಈ ಕಾರ್ಯಕ್ರಮವನ್ನು ‘ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ’ (India-France Year of Innovation) ದ ಅಡಿಯಲ್ಲಿ ಆಯೋಜಿಸಲಾಗುತ್ತಿದ್ದು, ಇದನ್ನು ಭಾರತದ ಪ್ರಧಾನಿ ಮತ್ತು ಫ್ರಾನ್ಸ್ ಅಧ್ಯಕ್ಷರು ಜಂಟಿಯಾಗಿ ಫೆಬ್ರವರಿ 2026 ರಲ್ಲಿ ಮುಂಬೈನಲ್ಲಿ ಉದ್ಘಾಟಿಸಿದ್ದರು. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular