ಕೆ.ಆರ್.ಪೇಟೆ : ತಾಲ್ಲೂಕಿನ ಕಿಕ್ಕೇರಿಯ ಖಾಸಗಿ ಶಾಲೆಯ ಬಸ್ ತಡೆದು ಕಿರಿಕ್ ಮಾಡಿದ್ದ ವಡ್ಡರಹಳ್ಳಿ ಗ್ರಾಮದ ಗಿರೀಶ(21) ಮತ್ತು ಕಿರಣ್(20) ಬಂಧಿತರು. ಕಿಕ್ಕೇರಿಯ ಖಾಸಗಿ ಶಾಲೆಯಿಂದ ಮಕ್ಕಳನ್ನು ಎಂದಿನಂತೆ ಅವರವರ ಗ್ರಾಮಗಳಿಗೆ ಸುರಕ್ಷಿತವಾಗಿ ಬಿಡಲು ಹೋಗುತ್ತಿದ್ದ ಖಾಸಗಿ ಶಾಲೆಯ ಬಸ್ ಅನ್ನು ಬಸವನಹಳ್ಳಿ ಮಾರ್ಗವಾಗಿ ವಡ್ಡರಹಳ್ಳಿಗೆ ಹೋಗುತ್ತಿರುವಾಗ ರಸ್ತೆ ಮಾರ್ಗ ಮದ್ಯದಲ್ಲಿ ಗಾಂಜಾ ಮತ್ತು ಮದ್ಯ ಸೇವಿಸಿದ್ದ ಕಿರಣ ಮತ್ತು ಗಿರೀಶ ನೆಶೆಯ ಅಮಲಿನಲ್ಲಿ ಶಾಲಾ ಬಸ್ ಅನ್ನು ತಡೆದು ನಿಲ್ಲಿಸಿ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಬಸ್ ಇಂದ ಕೆಳಗೆ ಇಳಿಸುವಂತೆ ನಮ್ಮ ಜೊತೆ ಕಳಿಸುವಂತೆ ದಮ್ಕಿ ಹಾಕಿದ ಪುಂಡರು.ಖಾಸಗಿ ಶಾಲಾ ಬಸ್ ಚಾಲಕನಿಗೆ ಅವಾಜ್ ಹಾಕಿ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದರು.
ಈ ಸಂಬಂಧ ವಿಡಿಯೋ ಸಮೇತ ಪುಂಡರ ವಿರುದ್ದ ಕಿಕ್ಕೇರಿ ಪೋಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿರುವ ಖಾಸಗಿ ಆಡಳಿತ ಮಂಡಳಿಯ ದೂರನ್ನು ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ
ಕೂಡಲೇ ಪುಂಡರನ್ನು ಅರೆಸ್ಟ್ ಮಾಡಿ ಪುಂಡರ ಅಟ್ಟಹಾಸವನ್ನು ಮಟ್ಟಹಾಕುವಂತೆ ಪೋಷಕರು ಹಾಗೂ ನೆಟ್ಟಿಗರು ಕಿಕ್ಕೇರಿ ಪೋಲಿಸರನ್ನು ಆಗ್ರಹಿಸಿದ್ದರು.
ಶಾಲಾ ವಾಹನವನ್ನು ಅಡ್ಡ ಗಟ್ಟಿ ಅಪ್ರಾಪ್ತ ಬಾಲಕಿಯನ್ನು ತಮ್ಮ ವಶಕ್ಕೆ ನೀಡುವಂತೆ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೇಯೇ ಎಚ್ಚೆತ್ತುಕೊಂಡು ಪುಂಡರ ಚಹರೆ ಹಿಡಿದು ಬೆನ್ನಟ್ಟಿದ ಕಿಕ್ಕೇರಿ ಪೋಲೀಸರು ಆರೋಪಿಗಳಾದ ವಡ್ಡರಹಳ್ಳಿ ಗ್ರಾಮದ ಗಿರೀಶ್(21), ಕಿರಣ್( 20) ಎಂಬ ಗಾಂಜಾ ನಶೆಯಲ್ಲಿ ತೇಲುತ್ತಿದ್ದ ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ.



