ಬೆಂಗಳೂರು: ಯೂಟ್ಯೂಬರ್ ಸಮೀರ್ ಅವರ ಮನೆಗೆ ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ (ಎಸ್ಐಟಿ) ಅಧಿಕಾರಿಗಳು ‘ದಾಳಿ‘ ನಡೆಸಿದ್ದಾರೆ ಎನ್ನುವುದು ಸುಳ್ಳು ಎಂದು ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ.
ಬನ್ನೇರುಘಟ್ಟ ಬಳಿಯ ಹುಲ್ಲಹಳ್ಳಿಯಲ್ಲಿರುವ ಸಮೀರ್ ನಿವಾಸಕ್ಕೆ ಇಂದು ಪೊಲೀಸರು ಆಗಮಿಸಿದ್ದಾರೆ.
ವಿಡಿಯೋ ಸಂಬಂಧ ನಡೆಯುತ್ತಿರುವ ವಿಚಾರಣೆಯಲ್ಲಿ ಮಹಜರು ಮಾಡುವ ಸಂಬಂಧ ಮನೆಗೆ ಬರುವುದಾಗಿ ಪೋಲೀಸರು ಸಾಕಷ್ಟು ಮುಂಚಿತವಾಗಿಯೇ ಸಮೀರ್ ಗೆ ಮಾಹಿತಿ ನೀಡಿದ್ದರು. ಮಹಜರು ಮತ್ತು ಹಾರ್ಡ್ ಡಿಸ್ಕ್ ವಶಕ್ಕೆ ತೆಗೆದುಕೊಳ್ಳುವ ಸಹಜವಾದ ಪ್ರಕ್ರಿಯೆ ಇದು. ಇದು ದಾಳಿಯಲ್ಲ. ಸಮೀರ್ ಅವರ ಲಭ್ಯತೆಯ ಬಗೆಗೆ ಪೊಲೀಸರೇ ಸಮೀರ್ ಅವರಿಂದ ಮಾಹಿತಿ ಪಡದುಕೊಂಡು ಪೂರ್ವನಿಗಧಿಯಂತೆ ಮನೆಗೆ ಭೇಟಿ ನೀಡಿದ್ದಾರೆ. ‘ದಾಳಿ, ಶಾಕ್‘ ಎನ್ನುವುದೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ.