ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ
ನನಗೆ ಜಪಾನಿನಲ್ಲಿ ಅಕ್ಕಿ ಕಾರ್ಖಾನೆ ಇದೆ. ಬೆಳಗಾವಿ ಜಿಲ್ಲಾ ಡೀಲರ್ ಶಿಫ್ ಕೊಡುವುದಾಗಿ ಹೇಳಿ ಹನ್ನೇರಡುವರೆ ಲಕ್ಷ ಹಣ ಪಡೆದು ಕಳಪೆ ಗುಣಮಟ್ಟದ ಅಕ್ಕಿ ಕೊಟ್ಟು ನಿವೃತ್ತ ಪೊಲೀಸಪ್ಪ ಪಂಗಮಾನ ಹಾಕಿ ಮೋಸ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೈಲಹೊಂಗಲನಲ್ಲಿ ಪಂಚರ್ ಅಂಗಡಿ ನಡೆಸುತ್ತಿದ್ದ ನಿವೃತ್ತ ಪೊಲೀಸ ಕಳೆದ 2016ರಲ್ಲಿ ಮೋಸ ಮಾಡಿದ್ದಾನೆ. ಪಂಚರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಅಂದು ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ನನ್ನ ಬಳಿ ಬಂದು ಐದು ಲಕ್ಷ ಹಣ ನೀಡಿದರೆ ನನಗೆ ಜಪಾನ್ ಅಕ್ಕಿಯ ಬೆಳಗಾವಿ ಡೀಲರ್ ಶಿಫ್ ಕೊಡಿಸುವುದಾಗಿ ಬರೋಬರಿ ಹನ್ನೆರಡು ಲಕ್ಷ ರೂ. ಪಂಗನಾಮ ಹಾಕಿದ್ದಾನೆ ಎಂದು ವಂಚನೆಗೊಳಗಾದ ಮಹಾಂತೇಶ ಗುಡಗರ ಆರೋಪಿಸಿದ್ದಾರೆ.
ನನಗೆ ಸ್ಟೋಕ್ ಹೊಡೆದಿದೆ. ನಾನು ಕಳೆದ 2016ರಲ್ಲಿ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರವಿಕಾಂತೇಗೌಡ ಅವರ ಗಮನಕ್ಕೆ ತರಲು ಹೋದಾಗ ನನ್ನ ಮೇಲೆ ದಬ್ಬಾಳಿಕೆ ಮಾಡಿದ್ದ ಪೊಲೀಸಪ್ಪ. ಕಾಕತಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಈಗ ನಿವೃತ್ತಿಯಾದ್ದಾನೆ. ನ್ಯಾಯ ಕೇಳಲು ಅವನ ಮನೆಗೆ ಹೋದಾಗ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾನೆ. ನನ್ನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನನಗೆ ಅನ್ಯಾಯ ಮಾಡಿದ ನಿವೃತ್ತ ಪೊಲೀಸಪ್ಪನಿಂದ ನನಗೆ ಮೋಸ ಮಾಡಿದ ಹನ್ನೆರಡುವರೆ ಲಕ್ಷ ಹಣ ಕೊಡಿಸಿ ನ್ಯಾಯ ಕೊಡಿಸಬೇಕೆಂದು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಮಾಧ್ಯಮದವರ ಮುಂದೆ ದೂರಿದರು.



                                    