ಬೆಂಗಳೂರು : ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಮಲಿಂಗರೆಡ್ಡಿ ಅವರು ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿರುವ ಸಿ.ಟಿ ರವಿ, ರಾಜೀನಾಮೆ ಒಳ್ಳೆಯ ಬೆಳವಣಿಗೆ ಅಲ್ಲ. ಡಿಕೆ ಶಿವಕುಮಾರ್ ಸಿಕ್ಸರ್ ಹೊಡದರು ಅಂತಾ ವರದಿಯಾಗಿತ್ತು. ಆದರೆ ಡಿಕೆಶಿ 2ನೇ ಬಾಲ್ ಗೆ ಹಿಟ್ ವಿಕೆಟ್ ಆಗಿದ್ದಾರೆ. ಇದು ಆಂತರಿಕ ಬೇಗುದಿಯ ಒಳ ಸ್ಪೋಟ ಎಂದು ಲೇವಡಿ ಮಾಡಿದ್ದಾರೆ.
ಬೆಂಗಳೂರು ನಗರಾಭಿವೃದ್ದಿ ಖಾತೆ ಬದಲು ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಅಸಮಾಧಾನಗೊಂಡು ರಾಮಲಿಂಗರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.



