ಹಾಸನ : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪೆನ್ಡ್ರೈವ್ ಹಂಚಿಕೆ ಸಂಬಂಧ ಎಸ್ಐಟಿ ಚಾರ್ಜ್ಶೀಟ್ ಸಲ್ಲಿಸಿದೆ.
ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಹಾಸನ ಸಿವಿಲ್ ಕೋರ್ಟ್ಗೆ ಎಸ್ಐಟಿ 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಒಟ್ಟು 39 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅಶ್ಲೀಲ ವಿಡಿಯೋ ಹಂಚಲು ಆರೋಪಿಗಳು 70 ಪೆನ್ಡ್ರೈವ್ ಖರೀದಿಸಿದ್ದರು. ಹಾಸನದಲ್ಲೇ 70 ಪೆನ್ಡ್ರೈವ್ ಖರೀದಿ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
ಪ್ರಕರಣದಲ್ಲಿ 52 ಮಂದಿ ಹೆಸರು ಉಲ್ಲೇಖ ಮಾಡಲಾಗಿತ್ತು. 52 ಮಂದಿಯಲ್ಲಿ 39 ಮಂದಿ ಆರೋಪ ಸಾಬೀತಾಗಿದೆ. ವಕೀಲ ಪೂರ್ಣಚಂದ್ರ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು. ಲೋಕಸಭೆ ಚುನಾವಣೆ ವೇಳೆ ಅಶ್ಲೀಲ ವಿಡಿಯೋ ವೈರಲ್ ಆಗಿತ್ತು. ಎಸ್ಐಟಿ ತನಿಖೆ ವೇಳೆ ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ.
70 ಪೆನ್ಡ್ರೈವ್ ಖರೀದಿಸಿ ವಿಡಿಯೋ ವೈರಲ್ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಈ ಸಂಬಂಧ 277 ಸಾಕ್ಷಿಗಳ ಹೇಳಿಕೆಯನ್ನು ಎಸ್ಐಟಿ ದಾಖಲಿಸಿದೆ. ತಾಂತ್ರಿಕ ವರದಿ, ಎಫ್ಎಸ್ಎಲ್ ಸಾಕ್ಷಿಗಳ ವರದಿ ಆಧರಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.
ಪ್ರಕರಣದಲ್ಲಿ ಎರಡು ಪಕ್ಷದ ಕಾರ್ಯಕರ್ತರ ವಿರುದ್ಧ ಆರೋಪ ಕೇಳಿಬಂದಿದೆ. ವಿಡಿಯೋ ವೈರಲ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಕೈಬಿಡಲಾಗಿದೆ. ತನಿಖೆ ಪೂರ್ಣಗೊಳಿಸಿ ಹಾಸನ ಕೋರ್ಟ್ಗೆ ಎಸ್ಐಟಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
39 ಆರೋಪಿಗಳು ಯರ್ಯಾರು?
ಎ1 ನವೀನ್, ಎ2 ಪ್ರಜ್ವಲ್ ಕಾರು ಚಾಲಕನಾಗಿದ್ದ ಕಾರ್ತಿಕ್.ಎನ್, ಎ3 ಚೇತನ್.ಬಿ.ಸಿ., ಎ4 ಚೇತನ್.ವೈ.ಎಸ್, ಎ5 ಲಿಖಿತ್ಗೌಡ, ಎ6 ದೇವರಾಜೇಗೌಡ, ಎ7 ಗಿರೀಶ್.ಎಸ್, ಎ8 ಯೊಗೇಶ್.ವೈ.ಡಿ., ಎ9 ನಿಶಾಂತ್, ಎ10 ಹರೀಶ್.ಎಸ್.ಎನ್, ಎ11 ಸುಮಂತ್, ಎ12 ಕೃಷ್ಣೇಗೌಡ, ಎ13 ಕಿರಣ್.ಎಸ್.ಕೆ, ಎ14 ಶರತ್.ಎಂ.ಕೆ., ಎ15 ತೇಜಸ್.ಡಿ.ಎನ್, ಎ16 ಗಗನ್ಕುಮಾರ್, ಎ17 ರೇವಂತ್, ಎ18 ಶಿವಪ್ರಸಾದ್, ಎ19 ನಾಗೇಂದ್ರ ಜೈನ್, ಎ20 ವಸಂತ್ಕುಮಾರ್, ಎ21 ಸಮೀರ್ಅಹ್ಮದ್, ಎ22 ಬಾಲಸುಬ್ರಹ್ಮಣ್ಯ, ಎ23 ಚಿರಂತ್, ಎ24 ದೇವರಾಜ್.ಡಿ.ಹೆಚ್, ಎ25 ಜಯಸೂರ್ಯ, ಎ26 ಚಂದ್ರಶೇಖರ್.ಬಿ.ಕೆ., ಎ27 ಕುಮಾರ್, ಎ28 ದಿನೇಶ್.ಕೆ.ಕೆ., ಎ29 ನವೀನ್ಕುಮಾರ್.ಎನ್.ವಿ., ಎ30 ಪ್ರಶಾಂತ್.ಬಿ.ಎಸ್., ಎ31 ಅನಿಲ್.ಹೆಚ್.ವಿ., ಎ32 ಹರ್ಷವರ್ದನ್.ಹೆಚ್.ಎಂ., ಎ33 ಅಕ್ಷಯ್ಕುಮಾರ್, ಎ34 ಪ್ರವೀಣ್ಕುಮಾರ್, ಎ35 ಹರೀಶ್.ಎನ್.ಸಿ., ಎ36 ಶಶಾಂಕ್.ಹೆಚ್.ಎಂ., ಎ37 ಭರತ್, ಎ38 ಚೇತನ್ಕುಮಾರ್, ಎ39 ಸೋಮಶೇಖರ್.ಕೆ.ಕೆ. ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಕೆ.



