Sunday, May 25, 2025
Google search engine

Homeರಾಜ್ಯಸುದ್ದಿಜಾಲಜಿಲ್ಲಾಸ್ಪತ್ರೆಗೆ ಅವಶ್ಯವಿರುವ ಸೌಲಭ್ಯಗಳ ಪಟ್ಟಿ ತಯಾರಿಸಿ ಸಲ್ಲಿಸಿ: ಸಚಿವ ಡಿ.ಸುಧಾಕರ್

ಜಿಲ್ಲಾಸ್ಪತ್ರೆಗೆ ಅವಶ್ಯವಿರುವ ಸೌಲಭ್ಯಗಳ ಪಟ್ಟಿ ತಯಾರಿಸಿ ಸಲ್ಲಿಸಿ: ಸಚಿವ ಡಿ.ಸುಧಾಕರ್

ಚಿತ್ರದುರ್ಗ: ಸಾರ್ವಜನಿಕರಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ದೊರಕುವಂತಾಗಲು, ಜಿಲ್ಲಾಸ್ಪತ್ರೆಗೆ ಅವಶ್ಯವಿರುವ ಸೌಲಭ್ಯಗಳ ಪಟ್ಟಿ ತಯಾರಿಸಿ ಮಾಹಿತಿ ನೀಡಬೇಕು. ಈ ಕುರಿತು ಆರೋಗ್ಯ ಸಚಿವರ ಬಳಿ ಚರ್ಚಿಸಿ, ಜಿಲ್ಲಾಸ್ಪತ್ರೆಗೆ ಅತ್ಯಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಇಲ್ಲಿನ ಜಿಲ್ಲಾಸ್ಪತ್ರೆ ಆವರಣದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 250 ಹಾಸಿಗೆ ಸಾಮಥ್ರ್ಯವಿರುವ ಜಿಲ್ಲಾಸ್ಪತ್ರೆಯು 450 ಬೆಡ್‍ಗಳಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಈ ಸಾಮಥ್ರ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ಹುದ್ದೆಗಳ ಮಾಹಿತಿಯನ್ನು ಸೃಜಿಸಿಕೊಂಡು ಅನುಮೋದನೆ ಪಡೆಯಬೇಕು ಎಂದು ಹೇಳಿದರು.

ಔಷಧಿಗಳು, ಮೆಡಿಸಿನಲ್ ಆಕ್ಸಿಜನ್, ಆರೋಗ್ಯ ಉಪಕರಣಗಳು, ಲ್ಯಾಬ್ ರಾಸಾಯನಿಕಗಳು, ಎಕ್ಸ್ ರೇ ಫಿಲಂಗಳು, ಯಂತ್ರೋಪಕರಣಗಳ ದುರಸ್ಥಿ, ವಿದ್ಯುತ್ ಸರಬರಾಜು ದುರಸ್ಥಿ, ಆರ್ಥೋ ಇಂಪ್ಲಾಂಟ್‍ಗಳು, ಲಿನನ್ ಸಾಮಾಗ್ರಿಗಳು, ಇಂಧನ, ನೀರು ಪೂರೈಕೆ, ಶೌಚಾಲಯ ದುರಸ್ಥಿ ಇನ್ನಿತರೆ ವೆಚ್ಚಗಳು ಸೇರಿದಂತೆ 2023-24ನೇ ಸಾಲಿನ ಆರ್ಥಿಕ ವರ್ಷಕ್ಕೆ ಜಿಲ್ಲಾ ಆಸ್ಪತ್ರೆಗೆ ರೂ.13 ಕೋಟಿ ಅಂದಾಜು ವೆಚ್ಚ ಇದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಸ್ಪತ್ರೆಯ ಆರ್ಥೋ, ಕಣ್ಣು, ಜನರಲ್ ಸರ್ಜರಿ, ರಕ್ತನಿಧಿ ಕೇಂದ್ರ, ಪಿಡಿಯೋಟ್ರಿಕ್ಸ್, ಫೋರೆನ್ಸಿಕ್ ವಿಭಾಗಗಳಿಗೆ ಅವಶ್ಯವಾಗಿ ಬೇಕಾಗಿರುವ ಯಂತ್ರೋಪಕರಣಗಳನ್ನು ನಿಯಮಾನುಸಾರ ಸಮಿತಿಯಲ್ಲಿ ಹಣ ಲಭ್ಯತೆಯ ಅನುಸಾರ ಸರಬರಾಜು ಪಡೆಯಲು ಅನುಮತಿ ನೀಡುವಂತೆ ಕೋರಿದರು. ಸಭೆಯಲ್ಲಿ ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಭಾರತೀಯ ವೈದ್ಯ ಸಂಘ ಜಿಲ್ಲಾ ಶಾಖೆಯ ಡಾ.ದಿನೇಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾಸ್ಪತ್ರೆಯ ಸಿಬ್ಬಂದಿ ಇದ್ದರು.

RELATED ARTICLES
- Advertisment -
Google search engine

Most Popular