ಚಾಮರಾಜನಗರ: ನಗರದ ಶ್ರೀಮತಿ ಲಕ್ಷ್ಮಿ ಮತ್ತು ಅಶ್ವಥ್ ನಾರಾಯಣ ಪುತ್ರಿ ಹಾಲಿ ಮೈಸೂರು ವಾಸಿ ಹೇಮಗಂಗ ಎ ರವರಿಗೆ ಮೈಸೂರು ಜಿಲ್ಲಾಡಳಿತ ನೀಡುವ 2023 ನೇ ಸಾಲಿನ ಪ್ರತಿಷ್ಠಿತ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಖ್ಯಾತ ಸಂಘಟಕಿ ಮತ್ತು ಕವಯಿತ್ರಿ ಎ.ಹೇಮಗಂಗಾ ಅವರಿಗೆ ಸಂಘಟನಾ ಕ್ಷೇತ್ರದಲ್ಲಿನ ಅನುಪಮ ಸೇವೆಯನ್ನು ಪರಿಗಣಿಸಿ ನೀಡಲಾಗಿದ್ದು , ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ಟಿ.ಎಸ್ . ಶ್ರೀವತ್ಸ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ . ಸಿರಿಗನ್ನಡ ವೇದಿಕೆಯ ನಿಕಟ ಪೂರ್ವ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀಮತಿ ಹೇಮಾಗಂಗಾ ರವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅಭಿನಂದಿಸಿದ್ದಾರೆ