Wednesday, May 21, 2025
Google search engine

HomeUncategorizedರಾಷ್ಟ್ರೀಯಯುಗಾದಿಗೆ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿ

ಯುಗಾದಿಗೆ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿ

ಯುಗಾದಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ. ಯುಗಾದಿ ಸಂತೋಷ, ಭರವಸೆ ಹಾಗೂ ಹೊಸ ಆರಂಭದ ಹಬ್ಬವಾಗಿದ್ದು, ವಿವಿಧ ಆಚರಣೆಗಳು ಮತ್ತು ವಿಶಿಷ್ಟವಾದ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ. ಯುಗಾದಿಯು ಹೊಸತನ ಮತ್ತು ನವೀಕರಣದ ಭರವಸೆಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.

ಎಲ್ಲರಿಗೂ ಅಪರಿಮಿತ ಸಂತೋಷ ಹಾಗೂ ಸಮೃದ್ಧಿಯಿಂದ ತುಂಬಿದ ವರ್ಷವನ್ನು ಆಶಿಸುತ್ತೇನೆ. ಈ ಶುಭ ಸಂದರ್ಭವು ಜೀವನದ ಪ್ರತಿಯೊಂದು ವಿಷಯದಲ್ಲೂ ನಿಮಗೆ ಸಂತೋಷ ತರಲಿ ಎಂದು ಹಾರೈಸಿದ್ದಾರೆ.

ಇದಿಷ್ಟೇ ಅಲ್ಲದೆ ತೆಲುಗು, ಮಣಿಪುರಿಯಲ್ಲಿ ಯುಗಾದಿಯಲ್ಲಿ ಸಜಿಬು ನೋಂಗ್ಮಾ ಪನ್ಬಾ ಎಂದು ಕರೆಯುತ್ತಾರೆ ಮೋದಿ ಶುಭ ಹಾರೈಸಿದ್ದಾರೆ.

ಮೋದಿ ಮತ್ತೊಂದು ಪೋಸ್ಟ್​ ನಲ್ಲಿ ದೇಶದ ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಚೈತ್ರ ನವರಾತ್ರಿಯ ಶುಭಾಶಯಗಳು ಎಂದು ಬರೆದಿದ್ದಾರೆ.ಶಕ್ತಿಯ ಆರಾಧನೆಯ ಈ ಮಹಾ ಹಬ್ಬವು ಎಲ್ಲರಿಗೂ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಆರೋಗ್ಯವನ್ನು ತರಲಿ ಎಂದು ನಾವು ಬಯಸುತ್ತೇವೆ ಎಂದಿದ್ದಾರೆ.

ಗುಡಿಪಾಡ್ವಾ, ಯುಗಾದಿ, ಚೇತಿ ಚಂದ್, ನವ್ರೆಹ್ ಮತ್ತು ಇತರ ವಿವಿಧ ಭಾಷೆಗಳಲ್ಲಿ ಹಬ್ಬಗಳ ಶುಭಾಶಯಗಳನ್ನು ತಿಳಿಸಿದರು.

RELATED ARTICLES
- Advertisment -
Google search engine

Most Popular