Monday, April 20, 2026
Google search engine

Homeದೇಶಖಾಸಗಿ ವಿಮಾನ ಪತನ-ಪೈಲಟ್​, ಕೋ-ಪೈಲಟ್ ಸಾವು

ಖಾಸಗಿ ವಿಮಾನ ಪತನ-ಪೈಲಟ್​, ಕೋ-ಪೈಲಟ್ ಸಾವು

ರಾಯ್ಪುರ: ಛತ್ತೀಸ್ ಗಢದಲ್ಲಿ ಖಾಸಗಿ ವಿಮಾನವೊಂದು ಪತನವಾಗಿ, ಪೈಲಟ್ ಹಾಗೂ ಸಹ ಪೈಲಟ್ ಇಬ್ಬರೂ ಮೃತಪಟ್ಟಿದ್ದಾರೆ ಎ೦ದು ತಿಳಿದುಬಂದಿದೆ.

ಛತ್ತೀಸ್ ಗಢದ ಜಶ್ ಪುರದಲ್ಲಿ ಈ ದುರಂತ ಸಂಭವಿಸಿದ್ದು, ವಿಮಾನ ಪತನಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಇದೊಂದು ಖಾಸಗಿ ವಿಮಾನವಾಗಿದ್ದು, ಭೂಮಿಯಿಂದ ಕೇವಲ 30 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನ ಪತನಗೊಂಡಿದೆ.

ವಿಮಾನ ಪತನಕ್ಕೂ ಮುನ್ನ ವಿಮಾನ ಮರಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ. ವಿಮಾನದಲ್ಲಿ ಪೈಲಟ್, ಸಹ ಪೈಲಟ್ ಬಿಟ್ಟು ಪ್ರಯಾಣಿಕರು ಯಾರೂ ಇರಲಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular