Saturday, December 27, 2025
Google search engine

Homeರಾಜ್ಯಪ್ರಧಾನಿ ಮೋದಿಯವರ ಕಾಲೆಳೆಯಲು ಎಐ ಚಿತ್ರವನ್ನು ಹಂಚಿದ್ದ ಪ್ರಿಯಾಂಕ್ ಖರ್ಗೆ..!

ಪ್ರಧಾನಿ ಮೋದಿಯವರ ಕಾಲೆಳೆಯಲು ಎಐ ಚಿತ್ರವನ್ನು ಹಂಚಿದ್ದ ಪ್ರಿಯಾಂಕ್ ಖರ್ಗೆ..!

ಹೊಸದಿಲ್ಲಿ / ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಬಗ್ಗೆ ರಾಹುಲ್ ಗಾಂಧಿ ಟೀಕಿಸಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಹ ಅದೇ ಧಾಟಿ ತೋರುತ್ತಿದ್ದಾರೆ. ಇವರೆಲ್ಲರಿಗೂ ವಾಸ್ತವ ಒಪ್ಪಿಕೊಳ್ಳುವ ನೈಜತೆಯೇ ಇಲ್ಲವೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ಈ ನಡುವೆ ನಕಲಿ ಸುದ್ದಿ ಮಸೂದೆಯಡಿ ಹೆಸರು ಮತ್ತು ಅವಮಾನದ ಸ್ವಯಂ ಘೋಷಿತ ಪ್ರತಿಪಾದಕ ಪ್ರಿಯಾಂಕ ಖರ್ಗೆ ಈಗ ಸ್ವತಃ ನಕಲಿ ಸುದ್ದಿಗಳನ್ನು ಸೃಷ್ಟಿಸಿ ಸಿಕ್ಕಿಬಿದ್ದಿದ್ದಾರೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ. ಅಲ್ಲದೆ ಜನರನ್ನು ದಾರಿ ತಪ್ಪಿಸಲು, ಅವ್ಯವಸ್ಥೆ ಸೃಷ್ಟಿಸಲು ಮತ್ತು ವಿಕೃತ ನಿರೂಪಣೆಯನ್ನು ಮುಂದಿಡಲು ಕರ್ನಾಟಕ ಐಟಿ ಸಚಿವರು AI- ರಚಿತ ಚಿತ್ರವನ್ನು ಹಂಚಿಕೊಳ್ಳುತ್ತಿರುವುದು ಸ್ಪಷ್ಟ ದುರುದ್ದೇಶವನ್ನು ಬಹಿರಂಗಪಡಿಸುತ್ತದೆ ಎಂದಿದ್ದಾರೆ.

ಜನರನ್ನು ದಾರಿ ತಪ್ಪಿಸಿ, ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಲು ಕರ್ನಾಟಕದ ಐಟಿ ಸಚಿವರು AI ರಚಿತ ಫೋಟೊವನ್ನು ಹಂಚಿಕೊಂಡಿರುವುದು, ಸಮಾಜದಲ್ಲಿ ಸೌಹಾರ್ದತೆಗೆ ಭಂಗ ತರುವ ದುರುದ್ದೇಶ ಬಹಿರಂಗವಾಗಿದೆ ಎಂದಿದ್ದು, ದೇಶದಲ್ಲಿ ಫಾಕ್ಸ್ ಕಾನ್ ನಂತಹ ಜಾಗತಿಕ ಪ್ರಮುಖ ಕಂಪನಿಗಳ ವಿಸ್ತರಣೆಗೆ ಕೇಂದ್ರ ಪ್ರೋತ್ಸಾಹಿಸುತ್ತಿದೆ. ಕರ್ನಾಟಕದಲ್ಲಿ ಸಹ ಈ ಕಾರ್ಖಾನೆ ಸ್ಥಾಪಿಸಲು ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಭೂಮಿ ಹಂಚಿಕೆ ಮಾಡಲಾಗಿತ್ತು ಎಂಬುದನ್ನು ಕಾಂಗ್ರೆಸ್ ಮರೆತುಬಿಟ್ಟಿದೆ ಎಂದು ಸಿಎಂಗೆ ಜೋಶಿ ತಿರುಗೇಟು ಕೊಟ್ಟಿದ್ದಾರೆ.

ಇನ್ನೂ ಕಾಂಗ್ರೆಸ್ ನಟಿಸುವುದನ್ನು ನಿಲ್ಲಿಸಿ, ವಾಸ್ತವವನ್ನು ಒಪ್ಪಿಕೊಳ್ಳಬೇಕು. ಭಾರತದ ಉತ್ಪಾದನಾ ಬೆಳವಣಿಗೆ ಪ್ರಧಾನಿ ಮೋದಿಯವರ ಕಲ್ಪನೆಯಂತೆ ಮೇಕ್ ಇನ್ ಇಂಡಿಯಾ ದ ಫಲಿತಾಂಶವೇ ಆಗಿದೆ ಎಂದು ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ.

ಅಲ್ಲದೆ ಕರ್ನಾಟಕ ಸರ್ಕಾರದಿಂದ ನಕಲಿ ಸುದ್ದಿ ಮಸೂದೆಯನ್ನು ಬಲವಾಗಿ ಪ್ರತಿಪಾದಿಸಿದ್ದು ಇದೇ ಸಚಿವರು. ಹಾಗೂ ತಪ್ಪು ಮಾಹಿತಿ ಬಿಲ್ ಅಡಿಯಲ್ಲಿ ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿ ಹರಡುವುದನ್ನು ನಿಯಂತ್ರಿಸಲು ಮುಂದಾದ ಸ್ವಯಂ ಘೋಷಿತ ಪ್ರತಿಪಾದಕ, ಈಗ ತಾವೇ ನಕಲಿ ಸುದ್ದಿಗಳನ್ನು ಸೃಷ್ಟಿಸಿ ಸಿಕ್ಕಿಬಿದ್ದಿದ್ದಾರೆ ಎಂದು ಜೋಶಿ ಪ್ರತಿಕ್ರಿಯಿಸಿದ್ದಾರೆ.

RELATED ARTICLES
- Advertisment -
Google search engine

Most Popular