Sunday, August 31, 2025
Google search engine

Homeಸ್ಥಳೀಯನಿರ್ಮಾಪಕ ಸಂದೇಶ್ ನಾಗರಾಜ್ ಜನ್ಮದಿನ: ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ ಹಾಗೂ ನಟ ಸುದೀಪ್

ನಿರ್ಮಾಪಕ ಸಂದೇಶ್ ನಾಗರಾಜ್ ಜನ್ಮದಿನ: ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ ಹಾಗೂ ನಟ ಸುದೀಪ್

ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರ ಜನ್ಮದಿನ ಆಚರಣೆ ಇಂದು ಮೈಸೂರಿನಲ್ಲಿ ಅದ್ಧೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಶುಭಾಷಯ ಕೋರಿದರು.

ಸಂಭ್ರಮದಲ್ಲಿ ಭಾಗಿಯಾದ ಖ್ಯಾತ ನಟ ಕಿಚ್ಚ ಸುದೀಪ್ ಅವರು, ಸಂದೇಶ್ ನಾಗರಾಜ್ ಅವರ ಕಲಾ ಬದುಕು ಯಶಸ್ಸಿನಿಂದ ಕೂಡಿರಲಿ, ಅವರಿಗೂ ಕುಟುಂಬಕ್ಕೂ ಸಂತೋಷ ಮತ್ತು ಆರೋಗ್ಯ ಹರಿದು ಬರುವುದು ಎಂದು ಹಾರೈಸಿದರು. ಅವರ ಆತ್ಮೀಯ ಮಾತುಗಳು ಅಭಿಮಾನಿಗಳ ಮನಸ್ಸನ್ನು ಗೆದ್ದಿತು.

ಸಂದೇಶ್ ನಾಗರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಬದ್ಧತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರಂತಹ ನಿರ್ಮಾಪಕರು ಇರಬೇಕು, ಅವರನ್ನು ನಾವು ಗೌರವದಿಂದ ನೋಡಬೇಕು. ಅವರನ್ನು ಉಳಿಸಿಕೊಂಡು ನಮ್ಮ ಚಿತ್ರರಂಗ ಮುಂದೆ ಸಾಗಬೇಕು ಎಂದರು

ಕಿಚ್ಚ ಸುದೀಪ್ ಅವರ ಹಾಜರಾತಿಯಿಂದ ಮೈಸೂರಿನಲ್ಲಿ ನಡೆದ ಸಂದೇಶ್ ನಾಗರಾಜ್ ಜನ್ಮದಿನ ಕಾರ್ಯಕ್ರಮಕ್ಕೆ ವಿಶೇಷ ಮೆರಗು ಸಿಕ್ಕಿತು. ಅವರ ಆತ್ಮೀಯ ಹಾರೈಕೆಗಳು ಕಾರ್ಯಕ್ರಮಕ್ಕೆ ಭಾವನಾತ್ಮಕ ಸ್ಪರ್ಶ ನೀಡಿದ್ದು, ಚಿತ್ರರಂಗದಲ್ಲಿ ಗೆಳೆತನ ಮತ್ತು ಪರಸ್ಪರ ಗೌರವ ಎಷ್ಟು ಅಗತ್ಯ ಎಂಬುದನ್ನು ಮತ್ತೊಮ್ಮೆ ನೆನಪಿಸಿ ಕೊಟ್ಟಿವೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಟ ಸುದೀಪ್ ಉಭಯ ಕುಶಲೋಪರಿ.

RELATED ARTICLES
- Advertisment -
Google search engine

Most Popular