ಪಿರಿಯಾಪಟ್ಟಣ : ನ್ಯಾಯಮೂರ್ತಿ ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗಿಕರಣದ ಅವೈಜ್ಞಾನಿಕ ವರದಿಯನ್ನು ಪುನರ್ ಪರಿಶೀಲಿಸಿ ಹೊಲಯ ಸಂಬಂಧೀತ ಜಾತಿಗಳನ್ನು ಒಟ್ಟುಗೂಡಿಸಿ ಹೊಲಯ ಸಮುದಾಯಕ್ಕಾಗಿ ಅನ್ಯಾಯವನ್ನು ಸರಿಪಡಿಸುವಂತ್ತೆ ಒತ್ತಾಯಿಸಿ ಹೊಲಯ ಒಳ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕರ್ತರು ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸಮಿತಿಯ ಮುಖಂಡ ಐಲಾಪುರ ರಾಮು ಮಾತನಾಡಿ ರಾಜ್ಯ ಸರ್ಕಾರವು ವೈಜ್ಞಾನಿಕ ವರ್ಗಿಕರಣ ಸಂಬಂಧಿಸಿದಂತ್ತೆ ನ್ಯಾ. ನಾಗ ಮೋಹನ್ ದಾಸ್ ರವರ ಏಕ ಸದಸ್ಯ ಆಯೋಗವನ್ನು ರಚಿಸಿ ಒಳ ಮೀಸಲಾತಿ ವರ್ಗಿಕರಣ ಮಾಡಲು ಸೂಚಿಸಿದರಿಂದ್ದ ಸಂಪೂರ್ಣವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.ಆದರೆ ಸಮೀಕ್ಷೆ ಪ್ರಕಾರ 27 ಲಕ್ಷ ಮಾದಿಗ ಮತ್ತು 24 ಲಕ್ಷ ಹೊಲಯ ಸಮುದಾಯ ಎಂದು ಗುರುತಿಸಿ ಆಯೋಗವು ವರದಿ ಸಲ್ಲಿಸಿದೆ. ಇದರ ಬಗ್ಗೆ ಸಚಿವ ಸಂಪುಟ ಸಭೆಯಾಲಾಗಲಿ ಸಾರ್ವಜನಿಕ ವಾಗಲಿ ಯಾವುದೇ ಚರ್ಚಿಸದೆ ಏಕ ಏಕ ಪಕ್ಷವಾಗಿ ನಿರ್ಧಾರ ಮಾಡಲಾಗಿದೆ.
ಹೊಲಯ ಸಮುದಾಯಕ್ಕೆ ವಂಚಿಸುವ ಭರದಲ್ಲಿ ಹೊಲಯ ಸಂಬಂಧಿತ ಜಾತಿಗಳು ಪರ್ಯಾಯ ಹೆಸರಿನಿಂದ ಗುರುತಿಸಿಕೊಂಡಿರುವ ಜಾತಿಗಳನ್ನು ಪ್ರವರ್ಗ-ಸಿನಲ್ಲಿ ಸೇರಿಸಿ ಇದೇ ಸಾಮಾಜಿಕ ಅಂಶಗಳನ್ನು ಒಳಗೊಂಡ ಸಂಬಂಧಿತ ಜಾತಿಗಳನ್ನು ಪ್ರವರ್ಗ- ಬಿ ಅಂದರೆ ಮಾದಿಗ ಸಂಬಂಧಿತ ಜಾತಿಗಳ ಪಟ್ಟಿಗೆ ಸೇರಿಸುವ ಮೂಲಕ ಹೊಲಯ ಸಮುದಾಯದ ಜಾತಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಒಳಮಿಸಲಾತಿ ವರ್ಗಿಕರಣದ ಹೆಸರಿನಲ್ಲಿ ಅನ್ಯಾಯ ವೆಸಗಿದ್ದಾರೆ ಎಂದು ಆರೋಪಿಸಿದರು.
ಮುಖಂಡ ಈರಾಜ್ ಬಹುಜನ್ ಮಾತನಾಡಿ ಎಡಗೈ ಮತ್ತು ಬಲಗೈ ಸಮುದಾಯದ ಸಹೋದರರು ಬಾಂಧವ್ಯ ದಿಂದ ಜೀವನ ನಡೆಸುತ್ತಿದ್ದೇವೆ. ಆದರೆ ಒಳ ಮೀಸಲಾತಿಯ ಮೂಲಕ ಈ ಬಾಂಧವ್ಯವನ್ನು ಹಾಳು ಮಾಡುವ ದುರುದ್ದೇಶವನ್ನು ಈ ವರದಿ ಹೊಂದಿದೆ. ಸ್ಪೃಶ್ಯ ಮತ್ತು ಅಸ್ಪೃಶ್ಯ ಸಮುದಾಯಗಳನ್ನು ಬೇರ್ಪಡಿಸುವುದರ ಮೂಲಕ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಸಂವಿಧಾನವು ಸಾಮಾಜಿಕ ನ್ಯಾಯ ಕಲ್ಪಿಸಿ ಕೊಡಬೇಕು. ಈ ದೃಷ್ಟಿಯಲ್ಲಿ ನಾವೆಲ್ಲರೂ ಹೋರಾಟ ಮಾಡಬೇಕು. ಆದ್ದರಿಂದ ದೋಷ ಪೂರಿತವಾದ ನಾಗ ಮೋಹನ್ ದಾಸ್ ವರದಿಯನ್ನು ಸರ್ಕಾರವು ಕೈಬಿಡಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ನ್ಯಾ. ನಾಗ ಮೋಹನ ದಾಸ್ ರವರ ಒಳಮೀಸಲಾತಿ ವರ್ಗಿಕರಣ ವರದಿಯ ಪ್ರತಿಯನ್ನು ಪ್ರತಿಭಟನಾ ನಿರತರು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಮನವಿ ಪತ್ರವನ್ನು ಶಿರಸ್ತೆದಾರ್ ಶಕೀಲ ಬಾನು ರವರ ಮೂಲಕ ಸರ್ಕಾರಕ್ಕೆ ರವಾನಿಸಲಾಯಿತು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ತಮ್ಮಣ್ಣಯ್ಯ, ಶ್ಯಾಮ್,ಮಾಜಿ ತಾ ಪಂ ಸದಸ್ಯರಾದ ಜಯಂತಿ,ಸೋಮಶೇಖರ್,ಗ್ರಾ ಪಂ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಪಿ.ಮಹದೇವ್, ಶಿವಣ್ಣ, ರಾಜು ಬೆಟ್ಟದ ತುಂಗಾ, ಶಿವರಾಜು ಕೋಮಲಾಪುರ, ಕಾಮರಾಜ್,ಸೋಮಶೇಖರ್, ಗಿರೀಶ್,ಗೋಪಾಲ ಚೆಲುವಯ್ಯ, ಹೊನ್ನೂರಯ್ಯ,ಮಂಜು ಆಯಿತನಲ್ಲಿ,ಕಾಂತರಾಜ್,ಗಿರೀಶ್, ರಾಜಯ್ಯ, ರಮಣ್ಣಯ್ಯ, ಜಯಣ್ಣ ಸೇರಿದಂತ್ತೆ ಇತರರಿದ್ದರು.