Friday, October 10, 2025
Google search engine

Homeರಾಜ್ಯಸುದ್ದಿಜಾಲಒಳ ಮೀಸಲಾತಿಯ ಅನ್ಯಾಯದ ವಿರುದ್ಧ ಅ 12ರಂದು ಪ್ರತಿಭಟನೆ: ಎಚ್‌ಡಿ ಕೋಟೆ ಸಜ್ಜು

ಒಳ ಮೀಸಲಾತಿಯ ಅನ್ಯಾಯದ ವಿರುದ್ಧ ಅ 12ರಂದು ಪ್ರತಿಭಟನೆ: ಎಚ್‌ಡಿ ಕೋಟೆ ಸಜ್ಜು

ವರದಿ ಎಡತೊರೆ ಮಹೇಶ್

ಎಚ್ ಡಿ ಕೋಟೆ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಸಭೆ ಕುರಿತು ಸಮುದಾಯದ ಮುಖಂಡ ಕೃಷ್ಣಾಪುರ ಶಿವಯ್ಯ ಮಾತನಾಡಿ, ಇದೇ ತಿಂಗಳ 12ನೇ ತಾರೀಖು ಟಿ. ನರಸೀಪುರದಲ್ಲಿರುವ ಎನ್. ರಾಚಯ್ಯರವರ ಸ್ಮಾರಕದಲ್ಲಿ ಒಳ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಬಿ. ಆರ್ ಬಾಸ್ಕರ್ ಪ್ರಸಾದ್ ಮತ್ತು ಅರುಣ್ ಕುಮಾರ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದರಿಂದ ಕೋಟೆ ಮತ್ತು ಸರಗೂರು ತಾಲೂಕಿನಿಂದ ಸುಮಾರು 500ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕುರ್ಣೇಗಾಲ ಬೆಟ್ಟಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿ ಮಾಡುವಾಗ ಮಾದಿಗ ಸಮುದಾಯಕ್ಕೆ ಹಲವಾರು ರೀತಿಯಲ್ಲಿ ಅನ್ಯಾಯವನ್ನು ಎಸಗಿದೆ ಇದನ್ನು ಸರಿಪಡಿಸುವಂತೆ ಟಿ. ನರಸೀಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಾಳಪ್ಪಾಜಿ ಸಿ, ಚೆಲುವರಾಜು, ಡಿ. ನಾಗರಾಜು ಶಿವರಾಜು, ರವೀಶ್, ಶಿವಾಜಿ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular