Thursday, October 16, 2025
Google search engine

Homeರಾಜ್ಯಸುದ್ದಿಜಾಲಸಿಎಂ, ಲೋಕಾಯುಕ್ತಕ್ಕೆ ಹೋರಾಟಗಾರ ಜಯಂತ್ ರಿಂದ ದೂರು

ಸಿಎಂ, ಲೋಕಾಯುಕ್ತಕ್ಕೆ ಹೋರಾಟಗಾರ ಜಯಂತ್ ರಿಂದ ದೂರು

ಮಂಗಳೂರು(ದಕ್ಷಿಣ ಕನ್ನಡ): ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡಿಪಾರು ಆದೇಶ ಮಾಡಲು ಕೋರ್ಟಲ್ಲಿ ಸುಮಾರು 13 ಖುಲಾಸೆಯಾದ ಕೇಸ್ ಗಳನ್ನು ಮತ್ತು ಇನ್ನೂ ಹಲವಾರು ದುರುದ್ದೇಶ ಪೂರಿತ ಪ್ರಕರಣಗಳನ್ನು ದಾಖಲು ಮಾಡಿಕೊಂಡು ಸಹಾಯಕ ಆಯುಕ್ತರ‌ ನ್ಯಾಯಾಲಯ ಪುತ್ತೂರು ಉಪ ವಿಭಾಗಕ್ಕೆ ಬಂಟ್ವಾಳ ಡಿ.ವೈ.ಎಸ್. ಪಿ ಅವರು ಸುಳ್ಳು ವರದಿ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನೀತಿ ತಂಡದ ಜಯಂತ್ ಟಿ ಅವರು ಕರ್ನಾಟಕ ಲೋಕಾಯುಕ್ತ, ರಾಜ್ಯ ಮಾನವ ಹಕ್ಕುಗಳ‌ ಆಯೋಗ ಹಾಗೂ ಸಿಎಂ, ಗೃಹ ಸಚಿವರಿಗೆ ದೂರು ಸಲ್ಲಿಸಿದ್ದಾರೆ.

ಮಹೇಶ್ ಶೆಟ್ಟಿ ಅವರ ಗಡಿಪಾರು ಪ್ರಕರಣದ‌ ವಿಚಾರಣೆ‌ ವೇಳೆ ಬಂಟ್ವಾಳ ಡಿ ವೈ.ಎಸ್.ಪಿ ಅವರು ಪುತ್ತೂರು ಸಹಾಯಕ ಕಮಿಷನರ್ ಅವರ ನ್ಯಾಯಾಲಯಕ್ಕೆ‌ ಸಲ್ಲಿಸಿರುವ ವರದಿಗಳನ್ನು ಉಲ್ಲಂಘಿಸಿ ದೂರು ನೀಡಲಾಗಿದೆ‌. ಮಹೇಶ್ ಶೆಟ್ಟಿ ಅವರನ್ನು ಗಡಿಪಾರು ಮಾಡುವ ನಿಟ್ಟಿನಲ್ಲಿ ಪ್ರಭಾವ ಬೀರಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಮಹೇಶ್ ಶೆಟ್ಟಿ ಅವರ ವಿರುದ್ಧ 26 ಪ್ರಕರಣಗಳಿದ್ದು ಅದರಲ್ಲಿ16 ಪ್ರಕರಣಗಳು ಈಗಾಗಲೆ ಖುಲಾಸೆಗೊಂಡಿವೆ ಎಂದು ಮಾಹಿತಿ ನೀಡಿರುವ ಜಯಂತ್, ಬಂಟ್ವಾಳ ಡಿವೈಎಸ್.ಪಿ‌ ಅವರು ಯಾವುದೇ ಸಮರ್ಪಕವಾದ ದಾಖಲೆ ಗಳನ್ನು ನೀಡದೆ ನ್ಯಾಯಾಲಯದಲ್ಲಿ ಖುಲಾಸೆಯಾದ ಪ್ರಕರಣಗಳ ಬಗ್ಗೆ ಲಿಖಿತವಾದ ಹೇಳಿಕೆಗಳನ್ನು ನೀಡಿದ್ದು ಇದು ನ್ಯಾಯಾಂಗಕ್ಕೆ ಮಾಡಿರುವ ನಿಂದನೆಯಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಇದಲ್ಲದೆ ಇನ್ನೂ ಹಲವು ಆರೋಪಗಳನ್ನು ಮಾಡಿದ್ದಾರೆ.

ಗಡಿಪಾರು ಪ್ರಕರಣದ ವಿಚಾರಣೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದರ ನಡುವೆಯೇ ಜಯಂತ್ ಸಾಮಾಜಿಕ ಜಾಲತಾಣಗಳಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ ವಿರುದ್ಧ ಹಲವು ಆರೋಪಗಳನ್ನು ಮಾಡಿ ವಿಡಿಯೋ ಒಂದನ್ನು ಹಾಕಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಸುಮೊಟೋ ಪ್ರಕರಣ‌ ದಾಖಲಿಸಲಾಗಿದೆ.

RELATED ARTICLES
- Advertisment -
Google search engine

Most Popular