78ನೇ ಸ್ವಾತಂತ್ರ್ಯೋತ್ಸವ-ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ ವತಿಯಿಂದ
ಮದ್ದೂರು: ತಾಲೂಕಿನ ನಗರಕೆರೆ ಗ್ರಾಮದಲ್ಲಿ ೭೮ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ ವತಿಯಿಂದ ಸುಮುಖ ಸೇವಾ ಟ್ರಸ್ಟ್ ಹಾಗೂ ಸುಮುಖ ನಿಧಿ ಲಿಮಿಟೆಡ್ ರವರ ಸಹಯೋಗದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರುಗಳು ಕಣ್ಣಿನ ತಪಾಸಣೆಯನ್ನು ನಡೆಸಿದರು.

ಕಾರ್ಯಕ್ರಮಕ್ಕೆ ಮದ್ದೂರು ಪಿಎಸ್‌ಐ ಮಂಜುನಾಥ್ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಸಂಘ ಸಂಸ್ಥೆಗಳ ಮೂಲಕ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಬಡಜನರಿರುತ್ತಾರೆ. ಅವರು ದೂರದ ಊರಿಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಶಕ್ತಿಶಾಲಿಗಳಾಗಿರುವುದಿಲ್ಲ ಈ ಕಾರ್ಯಕ್ರಮ ಸಾರ್ಥಕವಾಗಿದೆ ಎಂದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪ ಜೈ ಲಿಂಗು, ಸದಸ್ಯರಾದ ಸಂದೀಪ್, ರುದ್ರ, ಹನುಮಂತ, ಸುಮುಖ ಸೇವಾ ಟ್ರಸ್ಟ್ ನಅಧ್ಯಕ್ಷ ಕುಮಾರ್ ಮುಖಂಡರಾದ ಪ್ರಸನ್ನ, ಕೆಂಪೇಗೌಡ ಸಂಘದ ಪದಾಧಿಕಾರಿಗಳಾದ ಸಿದ್ದೇಶ್, ಅನಿಜಿತ್, ಪ್ರಕಾಶ್, ಸೇರಿದಂತೆ ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರು ಹಾಜರಿದ್ದರು.