Tuesday, June 3, 2025
Google search engine

Homeಆರೋಗ್ಯಸಾರ್ವಜನಿಕರಿಂದ ಸರ್ಕಾರಿ ಆಸ್ಪತ್ರೆಗಳ ಸೇವೆಗೆ ದೂರು ಆಹ್ವಾನ

ಸಾರ್ವಜನಿಕರಿಂದ ಸರ್ಕಾರಿ ಆಸ್ಪತ್ರೆಗಳ ಸೇವೆಗೆ ದೂರು ಆಹ್ವಾನ

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕುರಿತಾಗಿ ಹಲವು ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಅವ್ಯವಸ್ಥೆ ಕಂಡುಬಂದರೆ ದೂರು ನೀಡುವಂತೆ ವಾಟ್ಸಪ್‌ ನಂಬರ್‌ ಬಿಡುಗಡೆ ಮಾಡಿದೆ.

ವಾಟ್ಸಪ್ ನಂಬರ್ 9449843001ಗೆ ವಾಟ್ಸಾಪ್ ಮೂಲಕ ಮೆಸೇಜ್ ವಿಡಿಯೋ, ಪೋಟೋ ಕಳಿಸಿ ದೂರು ಸಲ್ಲಿಸಬಹುದಾಗಿದೆ.

ಸಾರ್ವಜನಿಕರು ಆಸ್ಪತ್ರೆಗಳಲ್ಲಿ ಕಾಣುವ ಅವ್ಯವಸ್ಥೆ, ಚಿಕಿತ್ಸೆ ಕೊರತೆಗಳ ಬಗ್ಗೆ ದೂರು ನೀಡಬಹುದು. ಪೋಟೊ, ವೀಡಿಯೋ ಸಮೇತ ವಾಟ್ಸಪ್ ಮೂಲಕ ಮಾಹಿತಿ ಕಳಿಸಲು ಅವಕಾಶವಿದೆ.

ಆರೋಗ್ಯ ಇಲಾಖೆಯು ಈ ಮೂಲಕ ಆಸ್ಪತ್ರೆಗಳಲ್ಲಿ ಸೇವಾ ಗುಣಮಟ್ಟವನ್ನು ಸುಧಾರಿಸಲು ಜನಸಹಭಾಗಿತ್ವವನ್ನು ಉತ್ತೇಜಿಸುತ್ತಿದೆ. ದೂರುಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು.

RELATED ARTICLES
- Advertisment -
Google search engine

Most Popular