ಪತ್ರಕರ್ತರ ಸಂಘದ ವತಿಯಿಂದ ನಡೆದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ
ವರದಿ : ವಿನಯ್ ದೊಡ್ಡ ಕೊಪ್ಪಲು
ಕೆ.ಆರ್.ನಗರ: ಪತ್ರಕರ್ತರು ಚುನಾಯಿತ ಸದಸ್ಯರಿಗೆ ಅಭಿವೃದ್ದಿ ವಿಚಾರದಲ್ಲಿ ಮಾರ್ಗದರ್ಶನ ನೀಡುವ ಮೂಲಕ ಅಭಿವೃದ್ದಿ ಕಾರ್ಯಗಳಿಗೆ ಕೈ ಜೋಡಿಸುವುದರ ಜತೆಗೆ ನಾವು ಜನರಿಗಾಗಿ ಮಾಡುವ ವಿಚಾರಗಳನ್ನು ಪ್ರಚಾರ ಪಡಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಪತ್ರಕರ್ತರ ಸಂಘದ ವತಿಯಿಂದ ನಡೆದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ನೊಂದವರ ಬಗ್ಗೆ ಮತ್ತು ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಆಗ ಜನಪ್ರತಿನಿಧಿಗಳು ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವುದು ಕಷ್ಟ ಸಾಧ್ಯವಾಗಿದ್ದು ಜೀವನ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪತ್ರಕರ್ತರನ್ನು ನೋಡಿದ್ದೇವೆ.
ನಮ್ಮ ಕ್ಷೇತ್ರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವವರು ಸಂಕೋಚವಿಲ್ಲದೆ ತಮ್ಮ ಸಮಸ್ಯೆಗಳನ್ನು ನನಗೆ ತಿಳಿಸಬೇಕು ಎಂದು ಮನವಿ ಮಾಡಿದರು. ಪತ್ರಕರ್ತರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಪಾಸ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಜಿಲ್ಲಾ ಪತ್ರಕರ್ತರ ಸಂಘದ ಭೂಮಿ ಪೂಜೆ ಸಂದರ್ಭದಲ್ಲಿ ಜಿಲ್ಲಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದ್ದು, ಇದಕ್ಕೆ ಬೇಕಾಗಿರುವ ೧೦ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಕಾಯ್ದಿರಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರಕರ್ತರ ಪರವಾಗಿ ಪತ್ರ ಬರೆದು ಒತ್ತಡ ಏರುತ್ತೇನೆ ಎಂದು ಮಾಹಿತಿ ನೀಡಿದರು.
ಚುನಾವಣಾ ಸಮಯದಲ್ಲಿ ಮಾತ್ರ ರಾಜಕಾರಣ ಮಾಡುವುದು ಸಹಜ ಆನಂತರ ಸರ್ವರನ್ನು ಸಮನಾಗಿ ಕಾಣಬೇಕು ಇದು ಪತ್ರಕರ್ತರಿಗೂ ಅನ್ವಯವಾಗುತ್ತದೆ ಈ ವಿಚಾರವನ್ನು ಪತ್ರಕರ್ತರು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ ಶಾಸಕ ಡಿ.ರವಿಶಂಕರ್ ಸಂಘದ ಸದಸ್ಯರಿಗೆ ಮತ್ತು ಸಂಘದ ಭವನದ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ರಾಜ್ಯ ಬಜೆಟ್‌ಗೂ ಮೊದಲು ಪತ್ರಕರ್ತರು ಚುನಾಯಿತ ಸದಸ್ಯರು, ಆರ್ಥಿಕ ತಜ್ಞರು ಮತ್ತು ರಾಜಕೀಯ ಮುಖಂಡರುಗಳ ಅಭಿಪ್ರಾಯ ಸಂಗ್ರಹಿಸಿ ಪತ್ರಿಕೆಗಳಲ್ಲಿ ವರದಿ ಮಾಡಬೇಕು. ಆಗ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು. ಹಣ ಮತ್ತು ಅಧಿಕಾರ ಒಂದೆಡೆ ಇದ್ದರೆ ಅದು ಸಮಾಜಕ್ಕೆ ಮಾರಕ ಅಂತಹಾ ಪರಿಸ್ಥಿತಿಯನ್ನ ಈಗ ಕಾಣುತ್ತಿದ್ದೇವೆ ಚುನಾಯಿತ ಸದಸ್ಯರಾದವರು ಜನರ ಹಿಂದೆ ಹೋಗುವ ಬದಲು ಹಣದ ಹಿಂದೆ ಹೋಗುತ್ತಿದ್ದಾರೆ.
ಇಂತಹವರಿಗೆ ಮಾರ್ಗದರ್ಶನ ಅವಶ್ಯಕವಿದ್ದು ಆ ಕೆಲಸವನ್ನು ಪತ್ರಿಕೆಗಳು ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಮಣ್ಯ, ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ನಟರಾಜ್, ಇಂಜಿನಿಯರ್ ಹೆಚ್.ಎನ್.ರಮೇಶ್ ಅರವರುಗಳನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ವಿನಯ್‌ದೊಡ್ಡಕೊಪ್ಪಲು, ಉಪಾಧ್ಯಕ್ಷ ಸಿ.ಸಿ.ಮಹದೇವ್, ಪ್ರಧಾನ ಕಾರ್ಯದರ್ಶಿ ಭೇರ್ಯ ಮಹೇಶ್, ಖಜಾಂಚಿ ನಾಗೇಶ್, ಕಾರ್ಯದರ್ಶಿ ಆನಂದ್ ಹೊಸೂರು, ಮಾಜಿ ಅಧ್ಯಕ್ಷ ವಿ.ಸಿ.ಶಿವರಾಮ್, ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರವಿಕುಮಾರ್ ನಿರ್ದೇಶಕರಾದ ಮಹಮದ್ ಶಭೀರ್, ಸ್ಪಿನ್ ಕೃಷ್ಣ, ರಾಮಕೃಷ್ಣೇಗೌಡ,ಸಿ.ಜಿ.ಮಧು,ರೋಜಮಹೇಶ್,ಯೋಗನಂದ್, ಶಿಲ್ಪಶ್ರೀನಿವಾಸ್, ಸದಸ್ಯರಾದ ಕೆ.ಟಿ.ರಮೇಶ್, ಕೆ.ಟಿ.ರಮೇಶ್ ಚೈತನ್ಯ, ಜಿಟೆಕ್ ಶಂಕರ್,ನಾಗಣ್ಣ,ಪ್ರಶಾಂತ್, ಕೆ.ಸಿ.ಮಹದೇವ್,ಎಸ್.ಬಿ.ಹರೀಶ್,ಸೇರಿದಂತೆ ಸಂಘದ ಸದಸ್ಯರು ಮತ್ತು ವಿವಿಧ ಪಕ್ಷಗಳ ರಾಜಕೀಯ ಮುಖಂಡರುಗಳು, ಸಂಘದ ಸಂಸ್ಥೆ ಪದಾಧಿಕಾರಿಗಳು ಹಾಜರಿದ್ದರು.