ಮಂಗಳೂರು (ದಕ್ಷಿಣ ಕನ್ನಡ): ಮನೆ ಕಳ್ಳತನದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕದಲ್ಲಿ ಇಂದು ಬಂಧಿಸಲಾಗಿದೆ. ಪ್ರವೀಣ್, ಬಂಧಿತ ಯುವಕ.
ದೂರುದಾರೆ ರೇವತಿ ಎಂಬವರು ನೀಡಿದ ದೂರಿನಂತೆ ಅ.12ರ ಬೆಳಿಗ್ಗೆ ವಾಸದ ಮನೆಯಿಂದ ಯಾರೋ ಕಳ್ಳರು 1 ಚಿನ್ನದ ಬಳೆ, 1ಕಿವಿಯೋಲೆ ಜೊತೆ 1 ಚಿನ್ನದ ಸರ ಹಾಗೂ ನಗದು ಹಣ ಕಳುವಾದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 89/2025 ಕಲಂ:331 (3), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದಾಗ ಆರೋಪಿ ಕಬಕ ಗ್ರಾಮದ ಸಿಟಿ ಗುಡ್ಡೆ ಮನೆಯ ಪ್ರವೀಣ್ (27) ಎಂಬಾತನನ್ನು ಪತ್ತೆಮಾಡಿ ವಶಕ್ಕೆ ಪಡೆದು ಕಳವು ಮಾಡಿದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಾಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.