ಮಡಿಕೇರಿ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗವು 2025 ರ ಸೆಪ್ಟೆಂಬರ್ 9 ಮತ್ತು 10 ರಂದು “ಕ್ವಾಲಿಟೇಟಿವ್ ಮೆಥೇಡ್ಸ್ ಇನ್ ಹೆಲ್ತ್ ರಿರ್ಚ್” ಎಂಬ ವಿಷಯದ ಮೇಲೆ ಎರಡು ದಿನಗಳ ಕಾರ್ಯಗಾರ ನಡೆಯಿತು.
ಈ ಕಾರ್ಯಗಾರದಲ್ಲಿ ವಿವಿಧ ವೈದ್ಯಕೀಯ ಕಾಲೇಜುಗಳ ಭೋಧಕ ಸಿಬ್ಬಂದಿಗಳು ಹಾಗೂ ಸ್ನಾತ್ತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿ ಅದರ ಸದುಪಯೋಗ ಪಡೆದುಕೊಂಡರು.
ಡಾ.ಕಲೈಸೇಲ್ವನ್. ಜಿ, ಆಲ್ ಇಂಡಿಯಾ ಇನ್ಸಟಿಟ್ಯುಟ್ ಆಫ್ ಮೆಡಿಕಲ್ ಸೈನ್ಸ್, ಮಂಗಲಗಿರಿ ಹಾಗೂ ಡಾ. ರೀನಾಮೋಹನ್, ಶ್ರೀ ಮನಕುಲ ವಿನಯಗರ್ ವೈದ್ಯಕೀಯ ಕಾಲೇಜ್ ಪಾಂಡಿಚೇರಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಈ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿ ಪ್ರಾಯೋಗಿಕ ಅಧಿವೇಶನ ನಡೆಸಿದರು.
ಕಾರ್ಯಗಾರದಿಂದ ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಹಾಗೂ ಸಂಕೀರ್ಣ ಆರೋಗ್ಯ ಸಮಸ್ಯೆಗಳನ್ನು ಅನ್ವೇಷಣೆ ಮಾಡಿ ರೋಗಿಗಳ ಕೇಂದ್ರಿತ ಆರೈಕೆ ಅಭಿವೃದ್ಧಿ ಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನುಡಿದರು.
ಈ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಲೋಕೆಶ್ ಎ. ಜೆ. ಅವರು ಹಾಗೂ ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಮತ್ತು ಕಾರ್ಯಕ್ರಮದ ಡಾ. ಮಹೇಶ್ .ಎಸ್ ಹೆಚ್ ರವರ ಸಹಯೋಗದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಗಾರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಚಟುವಟಿಕೆಯುತ ಹಾಗೂ ಅನುಭವಾತ್ಮಕ ಅಧಿವೇಶನ ಮೆಚ್ಚಿದರು.
ಮಡಿಕೇರಿ ಸೆ.10(ಕರ್ನಾಟಕ ವಾರ್ತೆ):-ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗವು 2025 ರ ಸೆಪ್ಟೆಂಬರ್ 9 ಮತ್ತು 10 ರಂದು “ಕ್ವಾಲಿಟೇಟಿವ್ ಮೆಥೇಡ್ಸ್ ಇನ್ ಹೆಲ್ತ್ ರಿರ್ಚ್” ಎಂಬ ವಿಷಯದ ಮೇಲೆ ಎರಡು ದಿನಗಳ ಕಾರ್ಯಗಾರ ನಡೆಯಿತು.