Sunday, September 7, 2025
Google search engine

Homeರಾಜ್ಯಸುದ್ದಿಜಾಲರಾಧೆ ಶ್ರೀಕೃಷ್ಣನ ಅಖಂಡ ಶಕ್ತಿಯ ರೂಪ: ಸುರೇಶ್ ಋಗ್ವೇದಿ

ರಾಧೆ ಶ್ರೀಕೃಷ್ಣನ ಅಖಂಡ ಶಕ್ತಿಯ ರೂಪ: ಸುರೇಶ್ ಋಗ್ವೇದಿ

  • ಚಾಮರಾಜನಗರದಲ್ಲಿ ಭಕ್ತಿ ಹಾಗೂ ಶ್ರದ್ಧೆಯಿಂದ ರಾಧಾಷ್ಟಮಿ ಆಚರಣೆ

ಚಾಮರಾಜನಗರ: ಭಗವಾನ್ ಶ್ರೀ ಕೃಷ್ಣನ ಅಖಂಡ ಶಕ್ತಿಯ ರೂಪವೇ ರಾಧೆ . ರಾಧೆ ಇಲ್ಲದೆ ಕೃಷ್ಣನಿಲ್ಲ. ರಾಧೆ ಲಕ್ಷ್ಮಿಯ ಅವತಾರ . ಪರಮ ದೇವತೆ .ಆನಂದದಾಯಕವಾದ ಶಕ್ತಿಯ ರೂಪವಾಗಿರುವ ರಾಧೆ ಭಾರತೀಯರ ಮನೆಮನೆಗಳನ್ನು ಪ್ರಜ್ವಲಿಸುತ್ತಿದ್ದಾರೆ ಎಂದು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ನಗರದ ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಂಡಿದ್ದ ಶ್ರೀ ರಾಧಾಷ್ಟಮಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಶುದ್ಧಿ ತತ್ವದ ಮೂಲ ರಾಧೆ. ಆಂತರಿಕ ಮತ್ತು ಬಾಹ್ಯ ಶಕ್ತಿಯ ಪ್ರತಿರೂಪವಾದ ರಾಧೆ ತಾಯಿಯ ಪ್ರತೀಕ. ಜೀವನ ಶಕ್ತಿಯ ಮೌಲ್ಯವನ್ನು ಪ್ರತಿಪಾದಿಸಿದವರು. ಬೃಂದಾವನವನ್ನು ಬಿಟ್ಟು ಮಥುರೆಗೆ ಶ್ರೀಕೃಷ್ಣ ಹೊರಟಾಗ ಬೃಂದಾವನದಲ್ಲಿ ಪ್ರತಿ ಹೆಜ್ಜೆಯಲ್ಲಿಯೂ ಕೃಷ್ಣನನ್ನು ಕಂಡವಳು. ರಾಧೆ ಎಲ್ಲಿ ಇರುತ್ತಾಳೋ ಅಲ್ಲಿ ಶ್ರೀ ಕೃಷ್ಣ ಇರುತ್ತಾರೆ . ಕಾಂತಿಮಯಿ, ಸರ್ವಮಯಿ, ದೇವಮಯಿ ಹಸನ್ಮುಖಿಯಾದವಳು ರಾಧೆ. ಪ್ರೀತಿ, ಮೃದುತ್ವ ,ಭಕ್ತಿಯ ದೇವತೆಯಾಗಿದ್ದಾಳೆ. ಅಂತರಿಕ ಶಕ್ತಿಯ ಸ್ಪೂರ್ತಿ ಪರಮದೇವತೆಯಾಗಿರುವ ರಾಧೆಯ ಸ್ಮರಣೆ ಸರ್ವರಿಗೂ ದಿವ್ಯಶಕ್ತಿಯನ್ನು ಆನಂದದ ಮನಸ್ಸನ್ನು ,ಪ್ರೀತಿಯ ನಗುವಿನ ಮನಸ್ಸನ್ನು ನೀಡುತ್ತದೆ. ಶ್ರೀ ಕೃಷ್ಣನ ಮುಗುಳ್ನಗೆಯ ಪ್ರತಿರೂಪವೇ ರಾಧೆ. ರಾಧೆ ಸಮೃದ್ಧಿ, ಯಶಸ್ಸು ,ಪರಿಪೂರ್ಣತೆ, ಸಂಪತ್ತು ಕರುಣೆ, ಶಕ್ತಿ ,ಆರಾಧನೆ, ಭಕ್ತಿ ಭಾವ, ಕರುಣೆ, ಪ್ರಕೃತಿ ,ಗೋವಿನ ಪ್ರತಿರೂಪವಾಗಿದೆ. ಶ್ರೀ ಕೃಷ್ಣಾಷ್ಟಮಿ ಹಾಗೂ ರಾಧಾಸ್ಟಮಿ ಕಾರ್ಯಕ್ರಮಗಳು ಮತ್ತು ಅವರ ಜೀವನ ಸಂದೇಶಗಳನ್ನು ಜಗತ್ತಿಗೆ ಸಾರುವ ಕಾರ್ಯ ಆಗಬೇಕಿದೆ ಎಂದರು.

ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ಮಾತನಾಡಿ ಕಳೆದೆರಡು ವರ್ಷಗಳಿಂದ ರಾಧಾಷ್ಟಮಿ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ರಾಧೆ ಸಂತೋಷದ ಆನಂದದ ಮಹಾಮಾತೆ ರಾಧೆಯ ಧ್ಯಾನ ಮನಸ್ಸಿಗೆ ತೃಪ್ತಿಯನ್ನು ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಿಂಚನ, ಸಾನಿಕ, ಶ್ರಾವ್ಯ ಋಗ್ವೇದಿ, ಕುಸುಮ, ವಾಣಿ ,ಮಾಲಾ, ಸರಸ್ವತಿ, ವಿಜಯಲಕ್ಷ್ಮಿ ,ಅರ್ಪಿತ, ಅನನ್ಯ, ಆಶಾ , ಮಹಾಲಕ್ಷ್ಮಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular