Wednesday, May 21, 2025
Google search engine

Homeರಾಜಕೀಯಚುನಾವಣಾ ಪ್ರಚಾರಕ್ಕೆ ರಾಹುಲ್ - ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಆಗಮನ: ಡಿ ಕೆ ಶಿವಕುಮಾರ್

ಚುನಾವಣಾ ಪ್ರಚಾರಕ್ಕೆ ರಾಹುಲ್ – ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಆಗಮನ: ಡಿ ಕೆ ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಎರಡು ದಿನಗಳ ಮಟ್ಟಿಗೆ ಚುನಾವಣಾ ಪ್ರಚಾರಕ್ಕೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಇಂದು ಡಿ ಕೆ ಶಿವಕುಮಾರ್ ಮನೆ ಮುಂದೆ ನೂರಾರು ಕಾರ್ಯಕರ್ತರು ಮುಖಂಡರು ಬೆಳಗಿನ ಸಮಯದಲ್ಲೇ ಜಮಾಯಿಸಿಬಿಟ್ಟಿದ್ದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ವಿರೋಧ ಪಕ್ಷಗಳಿಗೆ ಮತದಾರರ ಒಲವು ಗಳಿಸಲು ಯಾವುದೇ ವಿಷಯವಿರದ ಕಾರಣ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಜನ ಕಾಂಗ್ರೆಸ್ ಪಕ್ಷವನ್ನು ಅರಿಸಿ ಶಕ್ತಿ ನೀಡಿದ್ದಾರೆ ಮತ್ತು ತಮ್ಮ ಸರ್ಕಾರ ಅವರಲ್ಲಿ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದು ಶಿವಕುಮಾರ್ ಹೇಳಿದರು. ನಿನ್ನೆ ಸಿದ್ದರಾಮಯ್ಯ ಅವರ ಱಲಿಯಲ್ಲಿ ವ್ಯಕ್ತಿಯೊಬ್ಬ ಗನ್ ಇಟ್ಟುಕೊಂಡು ಸಿಎಂ ಇದ್ದ ವಾಹನ ಹತ್ತಿದ್ದ ವಿಷಯ ಡಿಸಿಎಂಗೆ ಗೊತ್ತೇ ಇರಲಿಲ್ಲ. ಕುಮಾರಸ್ವಾಮಿಯರು ಕೇಂದ್ರದಲ್ಲಿ ಕೃಷಿ ಸಚಿವನಾಗುವ ಬಗ್ಗೆ ಹೇಳಿರುವುದನ್ನು ಗೇಲಿ ಮಾಡಿದ ಶಿವಕುಮಾರ್ ಕನಸು ಕಾಣುವುದರಲ್ಲಿ ತಪ್ಪಿಲ್ಲ ಅದರೆ, ಎನ್ ಡಿಎ ಅಧಿಕಾರಕ್ಕೆ ಬಂದರೆ ತಾನೆ ಅವರ ಕನಸು ನನಸಾಗೋದು ಎಂದರು.

RELATED ARTICLES
- Advertisment -
Google search engine

Most Popular