ಚಿತ್ರದುರ್ಗ : ರಾಹುಲ್ ಗಾಂಧಿ ರಿಜೆಕ್ಟೆಡ್ ಗೂಡ್ಸ್. ಅವರನ್ನ ಪ್ರಧಾನಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಬಾಯ ಚಪಲಕ್ಕೆ ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡುವುದನ್ನ ಬಿಡಬೇಕು. ಈ ಜನ್ಮದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯನ್ನು ಜನ ರಿಜೆಕ್ಟ್ ಮಾಡಿದ್ದಾರೆ. ರಾಹುಲ್ ರಿಜೆಕ್ಟಡ್ ಗೂಡ್ಸ್ ಎಂದು ಟೀಕಿಸಿದರು.
ವಿನಃ ಕಾರಣ ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ ನವರು ಟೀಕೆ ಮಾಡುತ್ತಾರೆ. ಆರ್ ಎಸ್ ಎಸ್ ರಾಜಕೀಯ ಪಕ್ಷ ಅಲ್ಲ. ಅದು ಸ್ವಯಂ ಸೇವಾ ಸಂಘ. ವಿನಃಕಾರಣ ಆರ್ ಎಸ್ ಎಸ್ ವಿರುದ್ದ ಟೀಕೆ ಟಿಪ್ಪಣಿ ಸರಿಯಲ್ಲ. ಆರ್ ಎಸ್ ಎಸ್ ಕಾರ್ಯಾಲಯವಿದ್ದು ಸನ್ಯಾಸಿಗಳಂತೆ ಕೆಲಸ ಮಾಡ್ತಾರೆ ಎಂದು ಗೋವಿಂದ ಕಾರಜೋಳ ತಿಳಿಸಿದರು.



