ರಾಯಚೂರು:ದೇಶಪ್ರೇಮ ಮೆರೆಯಲು ಹೋಗಿ ಸುಮಾರು 150ಕ್ಕೂ ಹೆಚ್ಚು ಅಡಿ ಎತ್ತರದ ಯೂನಿಟ್ ಮೇಲೇರಿ ಕಾರ್ಮಿಕ ಹುಚ್ಚಾಟ ಮೆರೆದಿರುವ ಪ್ರಸಂಗ ರಾಯಚೂರು ತಾಲೂಕು ಶಕ್ತಿನಗರದ ಆರ್ ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಘಟನೆ ನಡೆದಿದ್ದು, ಆರ್ ಟಿ ಪಿ ಎಸ್ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗೆ ತಲೆ ಬಿಸಿಯಾಗಿದೆ. ಸುನಿಲ್ ಎಂಬ ಕಾರ್ಮಿಕ ಸುಮಾರು 150ಕ್ಕೂ ಹೆಚ್ಚು ಅಡಿ ಎತ್ತರದ ಆರ್ ಟಿಪಿಎಸ್ ನ 7ನೇ ಯುನಿಟ್ ಮೇಲೇರಿ ರಾಷ್ಟ್ರಧ್ವಜ ಹಾರಿಸಲು ಪ್ರಯತ್ನಪಟ್ಟಿದ್ದು ಅವನ ಹುಚ್ಚಾಟ ನೋಡಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಶಕ್ತಿನಗರ ಪೊಲೀಸ್ರಿಗೆ ಆರ್ ಟಿಪಿಎಸ್ ಸಿಬ್ಬಂದಿ ಮಾಹಿತಿ ನೀಡಿದ್ದು, ಪೊಲೀಸರು ಬರುತ್ತಿದ್ದಂತೆ ರಾಷ್ಟ್ರಧ್ವಜ ಹಾರಿಸಿ ಸುನಿಲ್ ಕೆಳಗೆ ಇಳಿದಿದ್ದಾನೆ.
