ಮಂಡ್ಯ: ರೈಲ್ವೆ ಅಂಡರ್ ಪಾಸ್, ಮಾರುಕಟ್ಟೆ ಗೆ ಶಾಸಕ ಗಣಿಗ ರವಿಕುಮಾರ್, ಡಿಸಿ ಡಾ.ಕುಮಾರ ಭೇಟಿ ನೀಡಿದ್ದು, ಅಂಡರ್ ಪಾಸ್ ಹಾಗೂ ಮಾರುಕಟ್ಟೆ ಕಾಮಗಾರಿ ವೀಕ್ಷಣೆ ಮಾಡಿದರು.
ಮಂಡ್ಯದ ಮಹಾವೀರ ವೃತ್ತದಲ್ಲಿ ಕಾಮಗಾರಿ ನಡೆಯುತ್ತಿದ್ದು, ಮುಗಿಯುವ ಹಂತದಲ್ಲಿರುವ ಅಂಡರ್ ಪಾಸ್ ಕಾಮಗಾರಿಯನ್ನು ಅಧಿಕಾರಿಗಳ ಜೊತೆಗೂಡಿ ಪರಿಶೀಲನೆ ನಡೆಸಿದರು.
ಮಂಡ್ಯ ನಗರದ ಹೃದಯ ಭಾಗವಾದ ಮಹಾವೀರ್ ವೃತ್ತದಿಂದ ಪೇಟೆ ಬೀದಿ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ LC-73 ರೈಲ್ವೆ ಕೆಲಸೇತ್ತುವೆ ಕಾಮಗಾರಿ ನಡೆಯುತ್ತಿದೆ.
ಮಾಜಿ ಸಂಸದೆ ಸುಮಲತಾ ಅವಧಿಯಲ್ಲಿ ಅನುಮೋದನೆಗೊಂಡು ಕಾಮಗಾರಿ ಪ್ರಾರಂಭವಾಗಿತ್ತು. ಇನ್ನು ಒಂದು ತಿಂಗಳೊಳಗೆ ಕಾಮಗಾರಿ ಸಂಪೂರ್ಣಗೊಳ್ಳುವ ಹಂತದಲ್ಲಿದೆ.
ಈ ವೇಳೆ ಮಾತನಾಡಿದ ಶಾಸಕ ಗಣಿಗ ರವಿಕುಮಾರ್, ಆಗಸ್ಟ್ ತಿಂಗಳಲ್ಲಿ ರೈಲ್ವೆ ಅಂಡರ್ ಪಾಸ್ ಉದ್ಘಾಟನೆಯಾಗಲಿದೆ. ಕಾಮಗಾರಿ ಮುಗಿಸಲು ಸೂಚನೆ ಕೊಡಲಾಗಿದೆ. ಮಾರುಕಟ್ಟೆ ಕಾಮಗಾರಿ ಕೂಡ ನಡೆಯುತ್ತಿದೆ. ಆದಷ್ಟೂ ಬೇಗ ಮಾರುಕಟ್ಟೆ ಉದ್ಘಾಟನೆಯಾಗಿ ವ್ಯಾಪರಸ್ತರಿಗೆ ಹಂಚಿಕೆಯಾಗಲಿದೆ ಎಂದು ತಿಳಿಸಿದರು.