Thursday, May 22, 2025
Google search engine

HomeUncategorizedರಾಷ್ಟ್ರೀಯರಾಜಸ್ಥಾನ: ಕೋಟಾದಲ್ಲಿ ಮತ್ತೋರ್ವ ನೀಟ್ ವಿದ್ಯಾರ್ಥಿ ಆತ್ಮಹತ್ಯೆ

ರಾಜಸ್ಥಾನ: ಕೋಟಾದಲ್ಲಿ ಮತ್ತೋರ್ವ ನೀಟ್ ವಿದ್ಯಾರ್ಥಿ ಆತ್ಮಹತ್ಯೆ

ರಾಜಸ್ಥಾನದ ಕೋಟಾದಲ್ಲಿ ಮತ್ತೋರ್ವ ನೀಟ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಷದಲ್ಲಿ ಸಂಭವಿಸಿದ 25ನೇ ಪ್ರಕರಣ ಇದಾಗಿದೆ.

ವಿದ್ಯಾರ್ಥಿಯನ್ನು ಪಶ್ಚಿಮ ಬಂಗಾಳ ಮೂಲದ ಫೌರೀದ್ ಹುಸೇನ್ ಎಂದು ಗುರುತಿಸಲಾಗಿದೆ. ನೀಟ್ ಆಕಾಂಕ್ಷಿಯಾಗಿದ್ದ ಹುಸೇನ್ ನಗರದ ವಕ್ಫ್ ನಗರ ಪ್ರದೇಶದಲ್ಲಿನ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ವಿವರಗಳ ಪ್ರಕಾರ, ವಿದ್ಯಾರ್ಥಿಯು ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದು, ಇತರ ಕೆಲವು ವಿದ್ಯಾರ್ಥಿಗಳು ಸಹ ವಾಸಿಸುತ್ತಿದ್ದರು. ಸಂಜೆ ಸುಮಾರು 4 ಗಂಟೆಗೆ ಹುಸೇನ್ ​ನನ್ನು ಕೊನೆಯ ಬಾರಿಗೆ ನೋಡಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ, ರೂಂ ಸುಮಾರು 7 ಗಂಟೆಯವರೆಗೆ ಒಳಗಿನಿಂದ ಲಾಕ್ ಆಗಿತ್ತು.

ಹುಸೇನ್ ಯಾರ ಕರೆಗಳಿಗೂ ಪ್ರತಿಕ್ರಿಯಿಸದ ನಂತರ ಅವರ ಸ್ನೇಹಿತರು ಮನೆ ಮಾಲೀಕರಿಗೆ ಕರೆ ಮಾಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿದ ಬಳಿಕ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ತನಿಖೆ ನಡೆಸುತ್ತಿದ್ದು, ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಿದ್ಯಾರ್ಥಿಯ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular