Wednesday, December 3, 2025
Google search engine

Homeರಾಜ್ಯಸುದ್ದಿಜಾಲರಾಜೀವ್ ದೀಕ್ಷಿತ್ ಭಾರತದ ಆಧುನಿಕ ಸ್ವದೇಶಿ ಹರಿಕಾರ : ಸುರೇಶ್ ಎನ್.ಋಗ್ವೇದಿ  ಹೇಳಿಕೆ

ರಾಜೀವ್ ದೀಕ್ಷಿತ್ ಭಾರತದ ಆಧುನಿಕ ಸ್ವದೇಶಿ ಹರಿಕಾರ : ಸುರೇಶ್ ಎನ್.ಋಗ್ವೇದಿ  ಹೇಳಿಕೆ

ಚಾಮರಾಜನಗರ:  ಸ್ವದೇಶಿ ಚಿಂತಕ, ಸ್ವದೇಶಿ ಬಂಧು, ರಾಜೀವ್ ದೀಕ್ಷಿತ್ ಭಾರತದ ಆಧುನಿಕ ಸ್ವದೇಶಿ ಹರಿಕಾರರು. ಇವರು ಭಾರತದ ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ರಾಸಾಯನಿಕಗಳು ಹಾಗೂ ವಸ್ತುಗಳ ಅಡ್ಡ ಪರಿಣಾಮಗಳ ಕುರಿತು ಸಮಗ್ರ ಜಾಗೃತಿ ಮೂಡಿಸಿದವರು ಎಂದು   ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ  ಸುರೇಶ್ ಎನ್.ಋಗ್ವೇದಿ  ತಿಳಿಸಿದರು.

ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಆಯೋಜಿಸಿದ ಸ್ವದೇಶಿ ಪ್ರೇಮಿ ರಾಜೀವ್ ದೀಕ್ಷಿತ್ ರವರ ಕೊಡುಗೆಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡುತ್ತ, ವಿಶ್ವದ ಶ್ರೇಷ್ಠ ವಿಜ್ಞಾನಿ, ಐಐಟಿ  ಪದವಿ ಪಡೆದು ಭಾರತದ ಕೋಟಿ ಕೋಟಿ ಭಾರತೀಯರಲ್ಲಿ ಸ್ವದೇಶಿ  ಪ್ರಜ್ಞೆ ಜಾಗೃತಿಗೊಳಿಸಿ ಯುವಕರ ಆದರ್ಶರಾದವರು ಎಂದಿದ್ದಾರೆ. ಹಾಗೂ ರೈತರಿಗೆ ಆಹಾರ ಉತ್ಪಾದನೆ, ವಿದೇಶಿಯ ವ್ಯಾಪಾರದ  ಮೋಸದ ಜಾಲವನ್ನು ಎಳೆ ಎಳೆಯಾಗಿ ವಿವರಿಸಿ, ಆಧಾರ ಸಮೇತ ಜಗತ್ತಿಗೆ ತಿಳಿಸಿದರು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ರಾಜೀವ್ ದೀಕ್ಷಿತ್ ಭಾವಚಿತ್ರಕ್ಕೆ ಪುಷ್ಪವನ್ನು ಸಲ್ಲಿಸಿ ಉದ್ಘಾಟನೆ ನೆರೆವೇರಿಸಿದ ಹಸಿರುಪಡೆಯ ಸಂಚಾಲಕ ಸತೀಶ್ ಮಾತನಾಡಿ,   ನಮ್ಮೆಲ್ಲರಿಗೂ  ಪರಿಸರ ಸಂರಕ್ಷಣೆ, ಕ್ರಿಮಿ ನಾಶಕಗಳ ಬಳಕೆಯ ಅಪಾಯ, ಆಹಾರ ಉತ್ಪಾದನೆಯಲ್ಲಿ ರಾಸಾಯನಿಕಗಳ ಬಳಕೆಯ ಪರಿಣಾಮ ಮುಂತಾದ ವಿಚಾರಗಳ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ನೀಡಿದ ಮಹಾನ್ ವ್ಯಕ್ತಿ. ಅವರ ಆಹಾರ ಸೂತ್ರಗಳು ವಿಶ್ವ ಖ್ಯಾತಿಯನ್ನು ಪಡೆದಿದೆ. ಭಾರತೀಯರಾದ ಪ್ರತಿಯೊಬ್ಬರು ಗೋ ಸಂಪತ್ತನ್ನು ಉಳಿಸಿ ಬೆಳೆಸುವ ಜೊತೆಗೆ ಪರಿಸರ ಸಂರಕ್ಷಣೆ, ಸ್ವದೇಶಿ ಜಾಗೃತಿ, ಪ್ಲಾಸ್ಟಿಕ್ ನಿರ್ಮೂಲನೆಯ ಬಗ್ಗೆ ಸದಾ ಕಾಲ ಜಾಗೃತಿ ಆಗಬೇಕು ಎಂದರು.

ಬಳಿಕ ಓಂ ಶಾಂತಿ ನ್ಯೂಸ್ ಬಿಕೆ ಆರಾಧ್ಯ ಮಾತನಾಡಿ, ಆಜಾದಿ ಬಚಾವೋ ಆಂದೋಲನದ  ದೀಕ್ಷಿತ್ 1967 ನವಂಬರ್ 30ರಂದು ಜನಿಸಿದರು. ಉದಾರೀಕರಣ, ಜಾಗತೀಕರಣ, ಖಾಸಗೀಕರಣದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಚಿಕ್ಕವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿದವರು , ನಗರದ ಋಗ್ವೇದಿ ಕುಟೀರಕ್ಕೆ  ಭೇಟಿ ನೀಡಿದ ಸವಿನೆನಪಿನಲ್ಲಿ ಪ್ರತಿವರ್ಷ ಅವರ ಕುರಿತು ಕಾರ್ಯಕ್ರಮ ರೂಪಿಸುತ್ತಿರುವ ಜೈ ಹಿಂದ್ ಪ್ರತಿಷ್ಠಾನ ಮಾದರಿಯಾದದ್ದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಮ್ ಪ್ರಸಾದ್, ಮಹೇಶ್, ಜೀವನ್ , ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular