ಮೈಸೂರು: ಅಯೋಧ್ಯಾ ರಾಮಮಂದಿರದ ಎರಡನೇ ವಾರ್ಷಿಕೋತ್ಸವದ ಪ್ರಯುಕ್ತ ಉದ್ಬೂರಿನಲ್ಲಿ ವಾಲ್ಮೀಕಿ ಹಾಗೂ ರಾಮಲಕ್ಷ್ಮಣರ ಮೂರ್ತಿಗಳನ್ನು ವಾದ್ಯಘೋಷ ಹಾಗೂ ಕಲಾ ತಂಡದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಗೆ ಬಿಜೆಪಿ ಮುಖಂಡರಾದ ಎನ್.ವಿ. ಫಣಿಶ್ ಹಾಗೂ ಅಪ್ಪಣ್ಣರವರು ಚಾಲನೆ ನೀಡಿದರು. ಆಯೋಜಕರಾದ ಬಿಜೆಪಿ ಚಾಮುಂಡೇಶ್ವರಿ ಗ್ರಾಮಾಂತರ ಮಂಡಲದ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಉಮೇಶ್, ಚಾಮುಂಡೇಶ್ವರಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಪೈಲ್ವಾನ್ ಟಿ.ರವಿ, ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ಎಸ್.ಟಿ ಮೋರ್ಚಾ ನಗರ ಉಪಾಧ್ಯಕ್ಷರಾದ ಎಸ್. ತ್ಯಾಗರಾಜ್, ಕೆ.ಆರ್. ಕ್ಷೇತ್ರದ ಮೋರ್ಚಾ ಅಧ್ಯಕ್ಷರಾದ ನಂದೀಶ್ ನಾಯಕ್, ಮುಖಂಡರಾದ ಶಿವು ಪಟೇಲ್, ಪೊಲೀಸ್ ಮಹೇಶ್, ಮಂಜು, ದಾರಿಪುರ ಚಂದ್ರು, ಕೆಂಪನಾಯಕ, ದಂಡ ನಾಯಕ, ಹಂಚ್ಯಾ ರವಿ, ಸುರೇಶ, ರಂಗಸ್ವಾಮಿ ಸೇರಿದಂತೆ ಗ್ರಾಮದ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.



