ಬೆಂಗಳೂರು: ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಗೆ ಸಂಬಂಧಪಟ್ಟ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಹೈಕೋರ್ಟ್ ಇಂದು ವಿಚಾರಣೆ ನಡೆಸಿದ್ದು, ಜುಲೈ ಮೊದಲ ವಾರಕ್ಕೆ ಮುಂದೂಡಲಾಗಿದೆ. ರನ್ಯಾ ತಾಯಿ ರೋಹಿಣಿ ಅವರು ತಮ್ಮ ಮಗಳು ಅಕ್ರಮವಾಗಿ ಬಂಧನದಲ್ಲಿರುವುದಾಗಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪ್ರಕಾರ, ರನ್ಯಾಗೆ ಜಾಮೀನು ಮಂಜೂರಾಗಿದೆ. ಆದರೆ ಹೈಕೋರ್ಟ್ ತಿಳಿಸಿದಂತೆ, ರನ್ಯಾ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಕಾಫೆಪೋಸಾ ಕಾಯ್ದೆ ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಇತ್ಯರ್ಥ ಸಲಹಾ ಮಂಡಳಿಯಲ್ಲಿ ತೀರ್ಮಾನವಾಗಬೇಕಿದೆ ಎಂದು ನ್ಯಾಯಾಲಯ ತಿಳಿಸಿದೆ.
ರನ್ಯಾ ಪರ ವಕೀಲರು, ಮಂಡಳಿಯಲ್ಲಿ ನಾಳೆ ವಿಚಾರಣೆ ನಡೆಯಲಿದೆ ಎಂದು ಉಲ್ಲೇಖಿಸಿದ್ದು, ಹೈಕೋರ್ಟ್ ಅರ್ಜಿಯ ಸ್ಥಿತಿಗತಿ ನೋಡಿ ಮುಂದಿನ ವಿಚಾರಣೆಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದೆ.