Saturday, July 5, 2025
Google search engine

Homeಅಪರಾಧರನ್ಯಾರಾವ್‌ಗೆ ಸೇರಿದ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ

ರನ್ಯಾರಾವ್‌ಗೆ ಸೇರಿದ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ರಾವ್‌ಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ತುಮಕೂರಿನಲ್ಲಿರುವ ಒಟ್ಟು 34.12 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿದೆ.

ವಿಕ್ಟೋರಿಯಾ ಲೇಔಟ್ ಮನೆ, ಅರ್ಕಾವತಿ ಲೇಔಟ್ ನ ಪ್ಲಾಟ್, ಶಿರಾದ ಇಂಡಸ್ಟ್ರಿಯಲ್ ಲ್ಯಾಂಡ್, ಆನೇಕಲ್ ನ ಕೃಷಿ ಭೂಮಿ ಸೇರಿದಂತೆ 34.12 ಕೋಟಿ ರೂ. ಆಸ್ತಿಯನ್ನು ಇಡಿ ವಶಕ್ಕೆ ಪಡೆದಿದೆ

ಇಡಿ ಹೇಳಿದ್ದೇನು?
ರನ್ಯಾ ರಾವ್ ಮತ್ತು ತರುಣ್ ಕೊಂಡೂರು ರಾಜು ಮತ್ತು ಇತರರು ದುಬೈ, ಉಗಾಂಡಾ ಮತ್ತು ಬೇರೆ ದೇಶಗಳಲ್ಲಿರುವ ಪೂರೈಕೆದಾರರಿಂದ ಚಿನ್ನವನ್ನು ಖರೀದಿಸಿ ಹವಾಲಾ ಮಾರ್ಗದ ಮೂಲಕ ನಗದು ಹಣವನ್ನು ಪಾವತಿಸುತ್ತಿದ್ದರು. ಕಳ್ಳಸಾಗಣೆ ಮಾಡಿದ ಚಿನ್ನವನ್ನು ಭಾರತದೊಳಗೆ ಆಭರಣ ವ್ಯಾಪಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಗದು ರೂಪದಲ್ಲಿ ಮಾರಾಟ ಮಾಡಲಾಗಿತ್ತು. ಈ ಹಣ ಮತ್ತೆ ಚಿನ್ನ ತರಲು ಬಳಕೆಯಾಗುತ್ತಿತ್ತು.

ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳ ಮೂಲಕ ವಿದೇಶದಲ್ಲಿರುವ ವಿದೇಶಿ ಚಿನ್ನದ ಪೂರೈಕೆದಾರರು, ಹವಾಲಾ ನಿರ್ವಾಹಕರು ಮತ್ತು ದುಬೈ ಮೂಲದ ಕಸ್ಟಮ್ಸ್ ಏಜೆಂಟ್‌ಗಳೊಂದಿಗೆ ಆರೋಪಿಗಳು ಸಂವಹನ ನಡೆಸಿರುವುದು ದೃಢಪಟ್ಟಿದೆ ಎಂದು ಇಡಿ ಹೇಳಿದೆ.

RELATED ARTICLES
- Advertisment -
Google search engine

Most Popular