ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಮಯ ಯಾಕೋ ಸರಿಯಾಗಿಲ್ಲ ಅನಿಸುತ್ತೆ. ಅವರ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ಆಗಿನಿಂದ ನಡೆಯುತ್ತಿದ್ದು, ಅದರ ವಿಚಾರಣೆಯನ್ನ ನ್ಯಾಯಲಯ ಮತ್ತೆ ಮುಂದೂಡಿದೆ.
ಹಾಸನದ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನ ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಯ ಮಾಡುತ್ತಿದೆ. ಸದ್ಯ ಪ್ರಕರಣದ ಬಗ್ಗೆ ತನಿಖಾಧಿಕಾರಿಗಳು ತಮ್ಮ ಎಲ್ಲಾ ಹೇಳಿಕೆಗಳನ್ನು ದಾಖಲಿಸಿದ್ದು, ಈಗ ನ್ಯಾಯಲಯವು ವಿಚಾರಣೆಯನ್ನ ಜೂನ್ 28ಕ್ಕೆ ಮುಂದೂಡಿದೆ.
ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಅನೇಕ ದಾಖಲೆಗಳನ್ನ ನ್ಯಾಯಲಯದ ಮುಂದೆ ನೀಡಿದ್ದು, ಅದರ ಜೊತೆ ಹೇಳಿಕೆಗಳನ್ನ ದಾಖಲಿದ್ದಾರೆ. ಇದುವರೆಗೂ ಎಲ್ಲಾ ಪ್ರಮುಖ ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಲಯ ದಾಖಲಿಸಿದ್ದು, ಎಸ್.ಪಿ.ಪಿ ಜಗದೀಶ್, ಅಶೋಕ್ ನಾಯಕರಿಂದ ಸಾಕ್ಷಿಗಳ ವಿಚಾರಣೆ ನಡೆಯುತ್ತಿದ್ದು, ಇನ್ನು ಮುಖ್ಯವಾಗಿ ತನಿಖಾಧಿಕಾರಿಗಳನ್ನ ಪ್ರಶ್ನೆ ಮಾಡುವ ಪಾಟಿ ಸವಾಲ್‌ಗೆ ಪ್ರಜ್ವಲ್ ಪರ ವಕೀಲರು ಸಮಯ ಕೇಳಿದ್ದು, ಹಾಗಾಗಿ ಪ್ರಕರಣವನ್ನ ಮುಂದೂಡಲಾಗಿದೆ.