ಯಾದಗಿರಿ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ಸ್ವಂತ ಚಿಕ್ಕಮ್ಮನ ಮೇಲೆ ಇಬ್ಬರು ಸಹೋದರರು ಸತತ ಏಳು ವರ್ಷಗಳ ಕಾಲ ಬೆದರಿಸಿ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನಲ್ಲಿ ನಡೆದಿದೆ.
ಸಹೋದರನ ಜೊತೆ ಸೇರಿ ಕಾನ್ಸ್ಟೇಬಲ್ ಒಬ್ಬ ಚಿಕ್ಕಮ್ಮನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಯಾದಗಿರಿ ಸಂಚಾರಿ ಠಾಣೆ ಕಾನ್ಸ್ಟೇಬಲ್ ರಮೇಶ್ ಹಾಗೂ ಜೆಸ್ಕಾಂ ನೌಕರ ಲಕ್ಷ್ಮಣ ವಿರುದ್ಧ ಸಂತ್ರಸ್ತ ಮಹಿಳೆ ಠಾಣೆ ಮೆಟ್ಟಿಲೇರಿದ್ದಾರೆ. ಗುರುಮಿಟ್ಕಲ್ ಠಾಣ ಗ್ರಾಮದ ವ್ಯಾಪ್ತಿಯಲ್ಲಿ ಏಳು ವರ್ಷಗಳಿಂದ ಜೀವ ಬೆದರಿಕೆ ಹಾಕಿ ನಿರಂತರ ಅತ್ಯಾಚಾರ ಎಸಗಿದ್ದಾರೆ ಅಲ್ಲದೆ ತನ್ನ ಪುತ್ರಿಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.