Wednesday, May 21, 2025
Google search engine

Homeರಾಜ್ಯಅಪರ‌ ಜಿಲ್ಲಾಧಿಕಾರಿಯಾಗಿ ರಾಯಪ್ಪ ಹುಣಸಗಿ ಅಧಿಕಾರ ಸ್ವೀಕಾರ

ಅಪರ‌ ಜಿಲ್ಲಾಧಿಕಾರಿಯಾಗಿ ರಾಯಪ್ಪ ಹುಣಸಗಿ ಅಧಿಕಾರ ಸ್ವೀಕಾರ


ಕಲಬುರಗಿ: ಕಲಬುರಗಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕೆ.ಎ.ಎಸ್. (ಹಿರಿಯ ಶ್ರೇಣಿ) ಅಧಿಕಾರಿ ರಾಯಪ್ಪ ಹುಣಸಗಿ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರು ನೂತನ ಅಪರ ಜಿಲ್ಲಾಧಿಕಾರಿಗೆ ಹೂಗುಚ್ಛ ನೀಡಿ ಅಧಿಕಾರ ಹಸ್ತಾಂತರಿಸಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೋಳೆಗಾಂವ ಮೂಲದವರಾದ ರಾಯಪ್ಪ ಹುಣಸಗಿ ಅವರು ಇಲ್ಲಿಗೆ ಬರುವ ಮುನ್ನ ಹಾವೇರಿ ಜಿಲ್ಲೆಯ ಸವಣೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದಕ್ಕು‌ ಮುನ್ನ ಗದಗ ಉಪ ವಿಭಾಗಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ‌ ಅನುಭವ ಹೊಂದಿದ್ದಾರೆ

RELATED ARTICLES
- Advertisment -
Google search engine

Most Popular