ನವದೆಹಲಿ: ಐಪಿಎಲ್ 2026ರ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಕೇವಲ 75 ರನ್ ಗಳಿಗೆ ಡೆಲ್ಲಿ ತಂಡವನ್ನು ಆಲೌಟ್ ಮಾಡಿದ ಆರ್ಸಿಬಿ, ಇನ್ನೂ 81 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ ಅಬ್ಬರಿಸಿತು.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ ಸಿಬಿ ಬೌಲರ್ ಗಳು ಮಾರಕ ದಾಳಿ ನಡೆಸಿದರು.
ಜೋಶ್ ಹ್ಯಾಜಲ್ವುಡ್ : 3.3 ಓವರ್ ಗಳಲ್ಲಿ ಕೇವಲ 12 ರನ್ ನೀಡಿ 4 ವಿಕೆಟ್ ಕಬಳಿಸಿದರು.
ಭುವನೇಶ್ವರ್ ಕುಮಾರ್: ಪವರ್ಪ್ಲೇನಲ್ಲಿ ಅಬ್ಬರಿಸಿ, 3 ಓವರ್ ಗಳಲ್ಲಿ ಕೇವಲ 5 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು.
ಸುಯಶ್ ಮತ್ತು ರೊಮಾರಿಯೋ ಶೆಫರ್ಡ್: ಮಧ್ಯಮ ಓವರ್ಗಳಲ್ಲಿ ಶಿಸ್ತುಬದ್ಧ ಬೌಲಿಂಗ್ ಮೂಲಕ ಸಾಥ್ ನೀಡಿದರು.
“ನನಗೇ ಆಶ್ಚರ್ಯವಾಗಿದೆ” : ರಜತ್ ಪಾಟೀದಾರ್
ಪಂದ್ಯದ ನಂತರ ಮಾತನಾಡಿದ ಆರ್ ಸಿಬಿ ನಾಯಕ ರಜತ್ ಪಾಟೀದಾರ್, ತಮಗೇ ಆಶ್ಚರ್ಯವಾಗಿದೆ ಎಂದು ತಿಳಿಸಿದರು. ಈ ಗೆಲುವಿನ ಸಂಪೂರ್ಣ ಕ್ರೆಡಿಟ್ ಬೌಲರ್ಗಳಿಗೆ ಸಲ್ಲಬೇಕು. ಪವರ್ ಪ್ಲೇನಲ್ಲಿ ಹ್ಯಾಜಲ್ವುಡ್ ಮತ್ತು ಭುವಿ ಅದ್ಭುತವಾಗಿ ಬೌಲಿಂಗ್ ಮಾಡಿದರು. ಆರಂಭದಲ್ಲೇ ಸ್ವಿಂಗ್ ಪಡೆದು ವಿಕೆಟ್ ಉರುಳಿಸಿದ್ದು ನಮಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಯಿತು” ಎಂದರು.



