ಮೈಸೂರು: ಆಸ್ತಿ ವಿಚಾರಕ್ಕೆ ಮಾರಕಾಸ್ತ್ರದಿಂದ ಕೊಚ್ಚಿ ಅಣ್ಣನನ್ನೇ ಕೊಂದಿರುವಂತ ಘಟನೆಯೊಂದು ಮೈಸೂರಲ್ಲಿ ನಡೆದಿದೆ. ಈ ಮೂಲಕ ರಾಜ್ಯದ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.
ಮೈಸೂರು ತಾಲ್ಲೂಕಿನ ಆನಂದೂರು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಅಣ್ಣ ಮಹೇಶ್(45) ಎಂಬಾತನನ್ನು ತಮ್ಮ ರವಿ ಹತ್ಯೆಗೈದಿದ್ದಾನೆ.
ತಂದೆ ಕೃಷ್ಣೇಗೌಡ, ಅತ್ತಿಗೆ ಮೇಲೂ ಮಾರಕಾಸ್ತ್ರಗಳಿಂದ ರವಿ ಹಲ್ಲೆ ಮಾಡಿದ್ದಾನೆ. ಮಹೇಶ್ ಗೆ ಮಾತ್ರ ತಂದೆ ಕೃಷ್ಣೇಗೌಡ ಆಸ್ತಿ ಹಂಚಿಕೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇದೇ ಕಾರಣದಿಂದ ಕೋಪಗೊಂಡಂತ ತಮ್ಮ ರವಿ, ಅಣ್ಣ ಮಹೇಶ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೈಸೂರಿನ ಇಲವಾಲ ಠಾಣೆಯ ಪೊಲೀಸರು ಆರೋಪಿ ರವಿಯನ್ನು ಬಂಧಿಸಿದ್ದಾರೆ.