Sunday, February 8, 2026
Google search engine

Homeಅಪರಾಧಮನೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಸಂಬಂಧಿ..!

ಮನೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಸಂಬಂಧಿ..!

ಮನೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಬಜ್ಪೆ ಪೊಲೀಸರು ಬಂಧಿಸಿದ್ದಾರೆ.ಅಬ್ದುಲ್ ನಾಸರ್ @ ನಾಸಿರ್ @ ನಾಚಿ, ಬಂಧಿತ ವ್ಯಕ್ತಿ. 23-09-2025 ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಷರೀಫ್ ರವರು ತನ್ನ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ ಕಳವಾರಿಗೆ ಹೋದಾಗ ರಾತ್ರಿ ಮನೆಯಲ್ಲಿದ್ದ ಸುಮಾರು 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1,25,000/- ರೂಪಾಯಿ ನಗದು ಹಣ ಕಳ್ಳತನವಾಗಿತ್ತು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 176/2025 ಕಲಂ ಕಲಂ 331(3), 331(4), 305 BNS 2023 ರಂತೆ ಪ್ರಕರಣ ದಾಖಲಾಗಿತ್ತು.
ಈ ಕೇಸಲ್ಲಿ ಬಜಪೆ ಪೊಲೀಸರು ಆರೋಪಿತರ ಪತ್ತೆ ಕಾರ್ಯಾಚರಣೆ ಮಾಡಿದಾಗ ಅಬ್ದುಲ್ ನಾಸರ್ @ ನಾಸಿರ್ @ ನಾಚಿ (31) ಎಂಬಾತನು ಕಳ್ಳತನ ಮಾಡಿ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ LOC ಹೊರಡಿಸಲಾಗಿತ್ತು. ಅಬ್ದುಲ್ ನಾಸೀರ್ @ ನಾಚಿ ಎಂಬಾತನನ್ನು LOC ಯಲ್ಲಿ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಪ್ರಕರಣದ ದೂರುದಾರರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಮತ್ತು ತಾನು ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತರಿಂದ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ 222 ಗ್ರಾಂ ತೂಕದ ಚಿನ್ನವನ್ನು, 20,000/- ರೂಪಾಯಿ ನಗದು ಹಣ, ಸುಮಾರು 50,000/- ರೂಪಾಯಿ ಮೌಲ್ಯದ ಸ್ಕೂಟರ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

  • ಮಂಗಳೂರಿನಿಂದ ಶಂಶೀರ್ ಬುಡೋಳಿ
RELATED ARTICLES
- Advertisment -
Google search engine

Most Popular